Posts

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

Image
ನಮ್ಮ ಮನೆ, ತೋಟವಿರುವುದು ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯಲ್ಲಿ. ಮಲೆನಾಡಿನ ಬಹುತೇಕ ಹಳ್ಳಿಗಳಂತೆ ನಮ್ಮೂರಲ್ಲಿ ನಮ್ಮದು ಬಿಟ್ಟರೆ ಇರುವುದು ಇನ್ನೆರಡೇ ಮನೆ; ತೋಟದ ಗಡಿಯಾಚೆ ಕಾಡು. ನಮ್ಮ ತೋಟಕ್ಕೆ ಭೇಟಿಮಾಡುವ ಎಲ್ಲರೂ ಕೇಳುವ ಮೊದಲ ಪ್ರಶ್ನೆ ಇಲ್ಲಿ ಪ್ರಾಣಿಗಳ ಕಾಟವಿಲ್ಲವೇ? ಯಾಕಿಲ್ಲ; ಮಂಗ, ಮಿಕ, ನವಿಲು, ಹಂದಿ, ಕೆಂಪಳಿಲು, ಮುಳ್ಳಂದಿ ಮತ್ತೂ ಬೇಕೇ… “ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ!” ಎನ್ನುವುದು ನಮ್ಮ ಉತ್ತರ. ಮಳೆಗಾಲಕ್ಕೆ ನೆಂಟರ ಮನೆಗೆ ಹೋದರೆ ಸಾಕು, ಸುದ್ದಿ ಶುರುವಾಗುವುದೇ “ಭಾವಾ, ನಿಮ್ಮಲ್ಲಿ ಕೊಳೆ ಹೆಂಗಿದ್ದೋ” ಅನ್ನುವಲ್ಲಿ. ಮಲೆನಾಡ ಮಳೆ ಕೊಳೆಗೆ ಅಂಜಿ ತೋಟ ಮಾಡುವುದು ಬಿಟ್ಟೀರೇ ಆದೀತೆ! ತೋಟದಲ್ಲಿ ಲುಕ್ಸಾನಾದಾಗೆಲ್ಲಾ “ಅಂಥಾ ನೀರಿಲ್ಲದ ಮರುಭೂಮಿಯಲ್ಲಿ, ಮುಗಿಲು ತೂತಾದಂತೆ ಮಳೆ ಸುರಿವ ಈಶಾನ್ಯ ಭಾರತದಲ್ಲಿ, ಕೊರೆವ ತಂಪಿನ ಹಿಮಾಲಯದ ತಪ್ಪಲಲ್ಲಿ ಬೆಳೆ ಬೆಳೆಯುವರಂತೆ, ನಮ್ಮದೆಂತ” ಎಂದು ಎಷ್ಟೋ ಬಾರಿ ನಮಗೆ ನಾವೇ ಸಮಧಾನ ಹೇಳಿಕೊಂಡಿದ್ದಿದೆ. ವಾತಾವರಣದ ಗಂಭೀರ ಪರಿಸ್ಥಿತಿಯಲ್ಲೂ ಬೆಳೆ ಬೆಳೆವ ಕೆಲವು ಪ್ರದೇಶದ ಜನರ ಕೃಷಿ ನೋಡುವಂತದ್ದು, ಕನಿಷ್ಟ ಓದಿ ತಿಳಿವಂತದ್ದು. ನವಯುಗದ ರೈತರು ತಾಂತ್ರಿಕವಾಗಿಯೂ, ಮಾನಸಿಕವಾಗಿಯೂ ಇದರಿಂದ ಕಲಿಯುವುದೂ ಬಹಳಷ್ಟಿದೆ. ಪ್ರಾಕೃತಿಕ ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಕೈಗೊಳ್ಳುತ್ತಿರುವ ಅಂತಹ ಕೆಲವು ಕೃಷಿ ಪ್ರಯೋಗಗಳ ಬಗೆಗೊಂದು ಮಾಹಿತಿಭ...

ಸ್ಪೇಸ್ ಫಾರ್ಮಿಂಗ್, ಬಾಹ್ಯಕಾಶದಲ್ಲಿ ಕೃಷಿ ಪ್ರಯೋಗ

Image
ಬಾಹ್ಯಾಕಾಶವೆಂದರೆ ಯಾರಿಗೆ ಕುತೂಹಲವಿಲ್ಲ! ನಮ್ಮ ಕಣ್ಣಿಗೆ ಕಾಣದ, ಕೈಗೆ ಸಿಗದ ಈ ಲೋಕವೇ ರೋಚಕ. ಶುಭಾಂಶು ಶುಕ್ಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಪ್ರತಿನಿಧಿಯಾಗಿ ಗಗನಯಾತ್ರೆ ಗೈದು ವಾಪಾಸಾದ ಮೇಲಂತೂ ಈ ಶಬ್ಧ ಕೇಳಿದರೇ ರೋಮಾಂಚನವೆನಿಸುತ್ತದೆ. ಶುಭಾಂಶು ಅವರ ಗಗನಯಾತ್ರೆಯಷ್ಟೇ ಹೆಮ್ಮೆ ಎನಿಸಿದ್ದು ನಮ್ಮ ಧಾರವಾಡ ಕೃಷಿ ವಿ.ವಿ.ಯ ಮೆಂತೆ ಮತ್ತು ಹೆಸರುಕಾಳು ಬೀಜಗಳು ಬಾಹ್ಯಾಕಾಶ ಮುಟ್ಟಿ ಮೊಳಕೆಯೊಡೆದು ಬಂದದ್ದು. ʼಬಾಹ್ಯಾಕಾಶ ಕೃಷಿʼ ಅಥವಾ ʼಸ್ಪೇಸ್‌ ಫಾರ್ಮಿಂಗ್‌ʼನ ಕಲ್ಪನೆ ಹೊಸತಲ್ಲ. ಮೊದಲೇ ಸೈನ್ಸ್‌ ಫಿಕ್ಷನ್‌ಗಳು (ವಿಜ್ಞಾನದ ಕಪೋಲಕಲ್ಪಿತ ಕತೆಗಳು) ನಿಜವಾಗುವ ಕಾಲಘಟ್ಟವಿದು. ನಾವು ನೀವು ಸ್ಪೇಸಿಗೆ ಹೋಗದೇ ಇದ್ದರೂ ಸೈ, ಕೃಷಿಗೆ ಮಹತ್ತರವಾದ ಕೊಡುಗೆ ನೀಡುವ ಸಂಶೋಧನೆಗಳ ಬಗ್ಗೆ ಇಲ್ಲಿಯೇ ಕುಳಿತು ತಿಳಿಯುವುದರಲ್ಲಿ ತಪ್ಪೇನಿದೆ! ಈ ಹಿನ್ನೆಲೆಯಲ್ಲೊಂದು ಮಾಹಿತಿ ಭರಿತ ರಂಜನೀಯ ಲೇಖನ.   ಬರವಣಿಗೆಯ ಜೊತೆಗೆ ಆಗಾಗ ಸಿನೆಮಾಗಳನ್ನು ನೋಡುವುದು ನನ್ನ ಹವ್ಯಾಸಗಳಲ್ಲೊಂದು. ಇತ್ತೀಚೆಗೆ ʼಮಾರ್ಶಿಯನ್‌ʼ ಎನ್ನುವ ಸಿನೆಮಾ ನೋಡುತ್ತಿರುವಾಗ ಕೃಷಿ ಹಿನ್ನೆಲೆಯಲ್ಲಿ ಇದರ ಕಥಾವಸ್ತು ತುಂಬಾ ಗಮನ ಸೆಳೆಯಿತು. ಗಗನಯಾತ್ರಿಗಳ ತಂಡವೊಂದು ಮಂಗಳ ಗ್ರಹದ ಅಧ್ಯಯನಕ್ಕೆಂದು ಯಾತ್ರೆ ಕೈಗೊಳ್ಳುತ್ತದೆ. ಅಲ್ಲಿ ತಂಗಿ ಅರ್ಧ ಸಮಯವಾಗಿರಬಹುದು, ʼಮಾರ್ಕ್‌ ವ್ಯಾಟ್ನಿʼ ಎಂಬ ಸಸ್ಯಶಾಸ್ತ್ರಜ್ಞ ಬಿರುಗಾಳಿಗೆ ಸಿಕ್ಕು ತಂಡದಿಂದ ದೂರ...

ಕಲಾಭೂಮಿಯ ಅಡಿಕೆ ಕಲಾಕೃತಿಗಳು

Image
  ಓಡಿಶಾ ಪ್ರವಾಸದ ಸಮಯ. ಭುವನೇಶ್ವರದ ಸುತ್ತಮುತ್ತ ನಾವಂದುಕೊಂಡ ಪ್ರವಾಸಿ ತಾಣಗಳನ್ನೆಲ್ಲಾ ನೋಡಿಯಾಗಿತ್ತು. ಮಾಡಹಾಗಲದ ಹೊಸ ತಳಿಗಳನ್ನು ಕಾಣಬೇಕೆಂದು ಚೆಸ್‌ (ಸೆಂಟ್ರಲ್‌ ಹಾರ್ಟಿಕಲ್ಚರ್‌ & ಎಕ್ಸ್‌ಪರಿಮೆಂಟ್‌ ಸ್ಟೇಶನ್)‌ ಭುವನೇಶ್ವರಕ್ಕೆ ಭೇಟಿ ಕೊಟ್ಟು ಮುಂದೆ ‘ಪುರಿ’ಗೆ ಹೊರಡುವುದಿತ್ತು. ಅಲ್ಲೊಬ್ಬರು ಕರ್ನಾಟಕದವರೇ ನಮ್ಮ ಪ್ಲಾನ್‌ ಎಲ್ಲಾ ಕೇಳಿತಿಳಿದು “ಮ್ಯುಸಿಯಮ್‌ಗೆ ಹೋಗಿದ್ರಾ!?” ಎಂದರು. ʼಸಮಯವಿದ್ದರೆ ಹೋಗೋಣʼ ಎಂದುಕೊಂಡಿದ್ದ ವಸ್ತುಸಂಗ್ರಹಾಲಯಗಳನ್ನು ಅವರು ನೋಡಲೇಬೇಕೆಂದು ಒತ್ತಾಯಿಸಿದಾಗ ಅದಾಗಲೇ ಮಧ್ಯಾಹ್ನವಾಗಿತ್ತು. ಪುರಿಗೆ ರಾತ್ರಿ ಪಯಣಿಸಿದರಾಯಿತೆಂದು ಊಟ ಮಾಡಿ ʼಸ್ಟೇಟ್‌ ಟ್ರೈಬಲ್ ಮ್ಯೂಸಿಯಮ್‌ʼ ಹೊಕ್ಕಿದೆವು. ನಮ್ಮ ದೇಶದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ, ಒಟ್ಟು ಅರವತ್ತು ನಾಲ್ಕು ಬುಡಕಟ್ಟು ಜನಾಂಗವನ್ನು ಹೊಂದಿರುವ ರಾಜ್ಯ ಓಡಿಶಾದ ಟ್ರೈಬಲ್ ಮ್ಯೂಸಿಯಮ್‌ನಲ್ಲಿ ನಾನು ಸ್ತಬ್ಧನಾಗಿ ನಿಂತಿದ್ದೆ. ಬೈಗಾ, ಕೊಂಡಾ, ಮುಂಡಾ, ಸೌರಾ, ಅದೆಷ್ಟು ಜನಾಂಗ; ಅವರದೇ ಆದ ಪೋಷಾಕು, ಆಭರಣ ಧರಿಸಿದ ಸ್ತಬ್ಧ ಚಿತ್ರ; ಅವರ ಕಲೆ , ಗೃಹೋಪಯೋಗಿ ವಸ್ತುಗಳು , ಸಂಗೀತ ವಾದ್ಯಗಳು ಇತ್ಯಾದಿಗಳ ಸಂಗ್ರಹ; ಸ್ಥಳದಲ್ಲೇ ನಡೆಯುತ್ತಿದ್ದ ಢೋಕ್ರಾ ಪಟಚಿತ್ರ, ಭೊತ್ತದ ಮುಂತಾದ ಕಲೆಗಳ ಪ್ರಾತ್ಯಕ್ಷಿಕೆ ನೋಡುತ್ತಾ ಮೂರು ತಾಸು ಕಳೆದುಹೋಗಿದ್ದೇ ತಿಳಿಯಲಿಲ್ಲ. ಮುಂದೆ ʼಕಲಾಭೂಮಿ ಕ್ರಾಫ್ಟ್‌ ಮ್ಯುಸಿಯಮ್‌ʼಗೆ ಹೊಕ್ಕಾಗ ನಾಲ್ಕು ಗಂಟೆ...

ಪಾಲಿಹೌಸ್ ಪುರಾಣ ಭಾಗ 2

Image
ʼನಾವೂ ಒಂದು ಪಾಲಿಮನೆ ಹೊಂದಬೇಕುʼ ಎಂಬ ಹಲವು ಜನರ ಹಂಬಲವನ್ನು ಉದ್ದೇಶಿಸಿ ಬರೆಯುತ್ತಿರುವ ಲೇಖನದ ಮೊದಲ ಭಾಗದಲ್ಲಿ ಪಾಲಿಮನೆಯೆಂದರೇನು, ಪಾಲಿಮನೆಯೆಂಬ ಕಲ್ಪನೆ ಶುರುವಾಗಿದ್ದು ಹೇಗೆ-ಎಲ್ಲಿ, ಭಾರತ ಸೇರಿ ವಿಶ್ವಾದ್ಯಂತ ಪಾಲಿಮನೆ ಕೃಷಿಯ ಪ್ರಸ್ತುತ ಚಿತ್ರಣವೇನು, ಪಾಲಿಮನೆಯ ವಿವಿಧ ಮಾದರಿಗಳು ಯಾವವು, ಪಾಲಿಮನೆ ಕೃಷಿಯ ಪ್ರಯೋಜನಗಳೇನು ಎಂದು ಸರಳವಾಗಿ ಚರ್ಚಿಸಲಾಗಿತ್ತು. ಮುಂದುವರೆದ ಭಾಗವಾಗಿ ಪಾಲಿಮನೆ ನಿರ್ಮಾಣಕ್ಕೆ ತಗಲುವ ವೆಚ್ಚ, ಪಾಲಿಮನೆಗಳಲ್ಲಿ ಲಾಭದಾಯಕವಾಗಿ ಕೈಗೊಳ್ಳಬಹುದಾದ ಚಟುವಟಿಕೆಗಳು, ಪಾಲಿಮನೆ ಕೃಷಿಯ ಸವಾಲುಗಳು, ಸ್ಥಳೀಯ ಕೃಷಿಯಲ್ಲಿ ಪಾಲಿಮನೆಯ ಅವಶ್ಯಕತೆ, ಲಾಭದಾಯಕತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸೋಣ. ತೆರೆದ ಮೈದಾನಕ್ಕಿಂತ ದುಪ್ಪಟ್ಟು ಇಳುವರಿ, ಹವಾಮಾನ ನಿಯಂತ್ರಣೆ, ಕೀಟ ರೋಗಗಳಿಂದ ಮುಕ್ತಿ, ನಿಖರ ಕೃಷಿಗೆ ಅವಕಾಶ, ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಸಾಧ್ಯತೆ ಹೀಗೆ ಲೇಖನದ ಮೊದಲ ಭಾಗ ಓದುತ್ತಾ ಪಾಲಿಮನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಕಂಡುಕೊಂಡಿದ್ದೇವೆ. ಅಷ್ಟು ಮಾತ್ರಕ್ಕೆ ಬೆಳೆ ಬೆಳೆಯುವ ಎಲ್ಲಾ ತೊಡಕಿಗೂ ಪಾಲಿಮನೆ ಪರಿಹಾರವೆಂದುಕೊಂಡರೆ ತಪ್ಪಾದೀತು. ಸಂರಕ್ಷಿತ ಬೇಸಾಯವೆಂದರೆ ಪ್ರಯೋಜನಗಳೆಷ್ಟೋ ಸವಾಲುಗಳೂ ಅಷ್ಟೇ!. ಅವುಗಳಲ್ಲಿ ನಿರ್ಣಾಯಕವಾದದ್ದು ಪಾಲಿಮನೆ ನಿರ್ಮಾಣಕ್ಕೆ ತಗಲುವ ವೆಚ್ಚ. ಪಾಲಿಮನೆ ದುಬಾರಿ ಎಂಬ ಕಹಿಸತ್ಯ ಅಷ್ಟದಿಕ್ಕಿಗಳಿಗೂ ಒಂದೊಂದು ಕಂಬ, ಆಧಾರಕ್ಕಾಗಿ ಕಮಾನ...

ಕ್ರಿಪ್ಟಾಂಥಸ್‌ಗಳ ಕೌತುಕ ಲೋಕ

Image
  ಒಳಾಂಗಣ ಸಸ್ಯಗಳನ್ನು ಸಂಗ್ರಹಣೆ ಮಾಡಲು ತೊಡಗಿದ್ದ ಪ್ರಾರಂಭದ ದಿನಗಳು; ನರ್ಸರಿಯೊಂದರಲ್ಲಿ‌ ಮೂರು ಇಂಚಿನ ಬಿಳಿ ಪ್ಲಾಸ್ಟಿಕ್‌ ಪಾಟ್‌ನಲ್ಲಿ ಅಕ್ಟೋಪಸ್‌ನ ಕೊರಕಲು ಕಾಲುಗಳಂತೆ ಹರಡಿದ್ದ ʼಬೇಬಿ ಪಿಂಕ್‌ʼ ಬಣ್ಣದ ಆ ಗಿಡಕ್ಕೆ ಮನ ಸೋತುಹೋಗಿತ್ತು. ದರವೆಷ್ಟೆಂದು ಕೇಳದೆ ನರ್ಸರಿಯವರು ಹೇಳಿದಷ್ಟು ಕೊಟ್ಟು ತಂದಿದ್ದೆ. ಹೀಗೆ ಪರಿಚಯವಾದದ್ದು ಕ್ರಿಪ್ಟಾಂಥಸ್‌ಗಳ ಕೌತುಕ ಲೋಕ. ಬೇಬಿ ಪಿಂಕ್‌ನಿಂದ ಶುರುಮಾಡಿ ಹಸಿರು, ಕಂದು, ಪಟ್ಟೆಪಟ್ಟೆಯ ವಿವಿಧ ಬಣ್ಣ ವಿನ್ಯಾಸದ ಹಲವಾರು ಕ್ರಿಪ್ಟಾಂಥಸ್‌ಗಳ ಸಂಗ್ರಹವಾಗಿತ್ತು. ಅವುಗಳಲ್ಲೊಂದು ತನ್ನ ಹೊಕ್ಕುಳಲ್ಲಿ ನಕ್ಷತ್ರದಂತ ಬಿಳಿ ಹೂಗಳನ್ನು ಬಿಟ್ಟು ಕಂಗೊಳಿಸುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಗಿಡ ಸಾಯತೊಡಗಿತು. ಕಾಳಜಿ ಹೆಚ್ಚಾಯಿತೋ, ನನ್ನ ದೃಷ್ಟಿಯೇ ತಾಕಿತೋ; ಗಿಡ ಸಾಯುತ್ತಿರುವುದನ್ನು ಕಂಡು ಬೇಜಾರಾದರೂ ಏನೂ ಮಾಡುವಂತಿರಲಿಲ್ಲ. ಹೇಗಿದ್ದರೂ ಗಿಡದ ಸಾವು ನಿಶ್ಚಿತ ಎಂದುಕೊಂಡು ತಾಯಿಯಿಂದ ಹೊರಟ ಚಿಕ್ಕ ಮರಿಗಳನ್ನು ಬೇರೆ ಮಾಡದೆ ಅವುಗಳ ಪಾಡಿಗೆ ಬಿಟ್ಟು ಸುಮ್ಮನಾದೆ. ಕೆಲವೇ ದಿನದಲ್ಲಿ ಆಶ್ಷರ್ಯ ಕಾದಿತ್ತು. ಆ ಮರಿಗಳೆಲಗಲಾ ದೊಡ್ಡ ದೊಡ್ಡ ಸಸ್ಯಗಳಾಗಿ ತಾಯಿಗಿಂತಲೂ ಚಂದಕ್ಕೆ ಬೆಳೆದು ನಿಂತಿದ್ದವು. ಕ್ರಿಪ್ಟಾಂಥಸ್‌ಗಳ ವಿಶಿಷ್ಟತೆಯ ಬಗ್ಗೆ ತಿಳಿದಿದ್ದು ಆಗಲೇ. ತಮ್ಮ ಜೀವಿತಾವಧಿಯಲ್ಲಿ ಒಂದೇ ಬಾರಿ ಹೂಬಿಟ್ಟು ತಕ್ಷಣ ಸಾಯುವ ಸಸ್ಯಗಳ ಬಗ್ಗೆ ತಿಳಿದೇ ಇರುತ್ತೀರಾ. ಅಂತಹುದೇ ...

ಪಾಲಿಹೌಸ್ ಪುರಾಣ ಭಾಗ 1

Image
ನಮ್ಮದು ಉತ್ತರಕನ್ನಡದ ಶಿರಸಿ ಸಮೀಪದ ಹಳ್ಳಿ. ಬಹಳ ವರ್ಷಗಳಿಂದ ಕೃಷಿ ಜೊತೆಜೊತೆಗೆ ಕೃಷಿ ಸಂಬಂಧೀ ಉದ್ದಿಮೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅದರಲ್ಲೊಂದು ʼಪಾಲಿಹೌಸ್‌ʼಗಳ ನಿರ್ಮಾಣದ ಕೆಲಸ. ಸರ್ಕಾರದಿಂದ ಮಾನ್ಯತೆ ಪಡೆದು ಕರ್ನಾಟಕದಾದ್ಯಂತ ಪಾಲಿಹೌಸ್‌ಗಳನ್ನು ನಿರ್ಮಿಸಿದ್ದೇವೆ, ನಿರ್ಮಿಸುತ್ತಲೂ ಇದ್ದೇವೆ. ʼನೀವೇನೋ ಪಾಲಿಹೌಸ್‌ ಕಟ್ತೀರಂತೆ, ನಮ್ದೊಂದು ಪಾಲಿಹೌಸ್‌ ಆಗಬೇಕಿತ್ತುʼ ಎಂದು ಹತ್ತಾರು ಜನ ಕರೆ ಮಾಡುತ್ತಲೇ ಇರುತ್ತಾರೆ. ಖರ್ಚು ವೆಚ್ಚ ಮಾತಾಡಿದ್ದೇ ʼಓಹ್‌ ಇದು ನಮಗಲ್ಲ ಬಿಡಿʼ ಎನ್ನುತ್ತಾ ಅರ್ಧ ಜನ ಕರೆ ಕಡಿತಗೊಳಿಸುತ್ತಾರೆ. ಇನ್ನೊಂದಿಬ್ಬರು “ಜಾಸ್ತಿ ಉದ್ದ ಬೇಡ, ಒಂದ್ ಹತ್ತಡಿ ಸಾಕು; ಒಂದು ಗುಂಟೆ ಅಷ್ಟೇ, ಕಡಿಮೆಗೆ ಮಾಡಿಕೊಡಿ” ಎಂದು ಕೋರಿಕೊಳ್ಳುತ್ತಾರೆ. ಪಾಲಿಹೌಸ್‌ಗೆ ಇಷ್ಟೇ ಅಗಲ ಇಷ್ಟೇ ಉದ್ದವೆಂಬ ಮಾನದಂಡವಿದೆ, ಇಲ್ಲವಾದಲ್ಲಿ ಅದು ಹೌಸ್‌ ಆಗಬಹುದೇನೋ, ಪಾಲಿಹೌಸ್‌ ಅಲ್ಲ ಎಂದಾಗ ನಿರಾಶೆಗೊಳ್ಳುತ್ತಾರೆ. ಇನ್ನೊಂದಿಬ್ಬರು ಸ್ವಲ್ಪ ಜಾಣ್ಮೆ ಉಪಯೋಗಿಸಿ “ನಮಗೆ ನಟ್‌ ಬೋಲ್ಟ್‌ ಬೇಡ, ವೆಲ್ಡಿಂಗ್‌ ಮಾಡಿದ್ರೆ ಸಾಕು” ಎಂದಾಗ, ಈ ತರಹದ ಕಳಪೆ ಗುಣಮಟ್ಟದ ಕಾಮಗಾರಿ ನಾವು ಮಾಡುವುದಿಲ್ಲವೆಂದು ನಾವೇ ಕರೆ ಕಟ್‌ ಮಾಡಿರುತ್ತೇವೆ. ಏನೇನೋ ಜುಗಾಡ್‌ ಮಾಡಿ ಮರದ ಕಂಬ ನಿಲ್ಲಿಸಿ ಪ್ಲಾಸ್ಟಿಕ್‌ ಶೀಟ್‌ ಹೊದೆಸಿ ಮನೆ ಕಟ್ಟಿಕೊಂಡವರು ಒಂದೇ ವರ್ಷದ ಮಳೆ-ಗಾಳಿಗೆ ಹರಿದುಕೊಂಡ ಬಿದ್ದ ನಂತರ ರಿಪೇರಿ ಮಾಡಿಕೊಡಿ ಎಂದ...

ಭಾರತದ ಸ್ವಂತದ ಕ್ರಿಸ್ಪರ್ ಭತ್ತ

Image
ಅಂತೂ ಈ ದಿನ ಬಂತು! ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಶ್ರಮಜೀವಿಯ ಇದೇ ವೇದಿಕೆಯಲ್ಲಿ ಕುಲಾಂತರಿಯ ಚರ್ಚೆ ಮುನ್ನೆಲೆಗೆ ಬಂದಾಗ ʼ ಕುಲಾಂತರಿ ಹಳೆಯದು ; ಬಂದಿದೆ ಅದರಪ್ಪ ಕ್ರಿಸ್ಪರ್ ʼ ಎಂಬ ಲೇಖನವೊಂದನ್ನು ನಾನು ಬರೆದಿದ್ದೆ. ಶ್ರಮಜೀವಿ ಸಂಪಾದಕರು ನನ್ನ ಅಂಕಣಕ್ಕೆ ʼಸೀಮಾತೀತʼ ಎಂದು ಹೆಸರಿಟ್ಟು ʼಸಾಮಾನ್ಯ ಕೃಷಿಕರಿಗಲ್ಲಾʼ ಎಂಬ ಟ್ಯಾಗ್‌ಲೈನ್‌ ಕೊಟ್ಟಿಬಿಟ್ಟಿದ್ದಾರೆ. ಆದರೂ ನವೆಂಬರ್‌ 2024ರ ಸಂಚಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ನೀವೇನಾದರೂ ಓದಿ (ಕಷ್ಟಪಟ್ಟು!?) ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದರೆ ಈಗ ಅದನ್ನು ʼಸೆಲಬ್ರೇಟ್‌ʼ ಮಾಡುವ ದಿನ. ಕ್ರಿಸ್ಪರ್‌ ಬಂದಾಗಿದೆ! ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಣ್ಣ ಹೆಡ್ಡಣ್ಣರೆಲ್ಲಾ ಮೈ ಮುಟ್ಟಿ ನೋಡಿಕೊಳ್ಳುವಂತ ಸಾಧನೆಯನ್ನು ಭಾರತ ಮಾಡಿ ತೋರಿಸಿದೆ. ಈ ಸಲ ಎಂದಿನಂತೆ ಬಾಹ್ಯಾಕಾಶ, ವೈದ್ಯಕೀಯ, ರಕ್ಷಣಾ ಕ್ಷೇತ್ರದಲ್ಲಲ್ಲ, “ಕೃಷಿ ಕ್ಷೇತ್ರದಲ್ಲಿ” ̤ ಅದೂ ಸದ್ದು ಗದ್ದಲವಿಲ್ಲದೆ ಆಡಂಬರದ ವೈಭವೀಕರಣವಿಲ್ಲದೆ.   ಮೇ ನಾಲ್ಕರಂದು ನವದೆಹಲಿಯ ʼನ್ಯಾಶನಲ್‌ ಅಗ್ರಿಕಲ್ಚರಲ್‌ ಸೈನ್ಸ್‌ ಕಾಂಪ್ಲೆಕ್ಸ್‌ʼನ ʼ ಭಾರತರತ್ನ ಸಿ.ಸುಬ್ರಹ್ಮಣ್ಯಂ ಸಭಾಂಗಣʼದಲ್ಲಿ, ರೈತರು-ಯುವವಿದ್ಯಾರ್ಥಿಗಳು-ವಿಜ್ಞಾನಿಗಳ ಸಮ್ಮುಖದಲ್ಲಿ ಕೃಷಿ ಸಚಿವರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ʼಡಿ.ಆರ್.ಆರ್‌ ರೈಸ್‌ 100ʼ ಅಥವಾ ʼಕಮಲಾʼ ( DRR Rice 100/Kamla) ಮತ್ತು ʼಪೂಸಾ ಡಿ.ಎಸ್.ಟಿ ರೈಸ್‌ ...