ಗೋವು, ನಾವು ಮತ್ತು ‘ಗ್ಲೋಬಲ್ ವಾರ್ಮಿಂಗ್’
Here is an article about dairy farming and its impact on global warming. Moral of the article is to reduce consumption of beef! because this meat industry is what contributing greatly to methane and other green house gas emissions according to FAO! ಗೋವು, ನಾವು ಮತ್ತು ‘ಗ್ಲೋಬಲ್ ವಾರ್ಮಿಂಗ್’ ಕೆಲ ತಿಂಗಳ ಹಿಂದೆ ರಾಜ್ಯದ ' ಸೋ ಕಾಲ್ಡ್ ' ಬುದ್ಧಿ ಜೀವಿಗಳು ಪತ್ರಿಕಾ ಗೋಷ್ಠಿ ಕರೆದು ಗೋ ಮಾಂಸ ತಿಂದು ಏನೋ ಸಾಧನೆ ಮಾಡಿದವರಂತೆ ಬೀಗಿದರು. ಇನ್ನೊಂದೆಡೆ ಗೋ ಸಂರಕ್ಷಣೆಯ ಭಾಷಣಗಳು ಕೇಳಿ ಬಂದವು. ಇಷ್ಟೆಲ್ಲ ಮಾತು ಕಥೆಗಳ ನಡುವೆ ಸದ್ದಿಲ್ಲದೆ ವಿಜ್ಞಾನಿಗಳು ಸುಸ್ಥಿರ ಹೈನುಗಾರಿಕೆಯ ( sustainable dairy farming ) ಅವಶ್ಯಕತೆಯನ್ನು ಪಟ್ಟಿ ಮಾಡುತ್ತಿದ್ದರು. ಕಾರಣ ಗೋವಿಗೂ ಜಾಗತಿಕ ಭೂ ತಾಪಮಾನ ಏರಿಕೆಗೂ ಇರುವ ಸಂಬಂಧ! ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತ್ಯಂತ ಮಹತ್ವದ ಸಮಸ್ಯೆ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ. ಸುಲಭ ಶಬ್ದಗಳಲ್ಲಿ ಹೇಳುವುದಾದರೆ ಭೂಮಿಯ ಸರಾಸರಿ ಉಷ್ಣತೆಯಲ್ಲಿ ಏರಿಕೆ. ಜ್ವರ ಬಂದಾಗ ದೇಹದ ತಾಪಮಾನ ಏರಿದಂತೆ ಭೂಮಿಯಲ್ಲಿನ ಹಸಿರುಮನೆ ಅನಿಲಗಳು( green house gases ) ಸೂರ್ಯ ವಿಕಿರಣ ಶಾಖವನ್ನು ಹಿಡಿದಿಟ್ಟು ಭೂಮಿಯ ಒಟ್ಟಾರೆ ಉಷ್ಣತೆಯನ್ನು ಹೆಚ್ಚಿಸುತ್ತವೆ. ಕ್ಲೋರೊ ಫ್ಲೋರೋ ಕಾರ್ಬನ್ , ಇಂಗಾಲದ ಡ...