ಫಿಟ್ಟೋನಿಯಾ ವರ್ಣ ವೈವಿಧ್ಯ


 ಮನುಷ್ಯನ ಅಂಗಾಂಗಕ್ಕೂ ಸಸ್ಯಗಳ ಹೂವು ಕಾಯಿಗೂ ಏನೋ ಹೇಳಿತೀರದ ಸಂಬಂಧಮೆದುಳಿನಂತ ಅಕ್ರೂಟ್ಕಿಡ್ನಿಯಂತ ಅವರೆಲೇಡಿಸ್ ಫಿಂಗರ್ ನಂತ ಬೆಂಡೆಕಮಲದಂತ ನಯನತೊಂಡೆಯಂತ ತುಟಿದಾಳಿಂಬೆಯಂತ ಹಲ್ಲುಬ್ಲೀಡಿಂಗ್ ಹಾರ್ಟ್ ಬಳ್ಳಿಹೀಗೆ  ಪಟ್ಟಿ ಅಂತ್ಯವಿಲ್ಲದೇ ಸಾಗಬಲ್ಲದುಇದಕ್ಕೊಂದು ಸೇರ್ಪಡೆ ನರನಾಡಿಗಳ ವ್ಯೂಹವನ್ನು ಹೋಲುವ ಎಲೆಗಳುಳ್ಳನರ್ವ್ ಪ್ಲಾಂಟ್ ಅಥವಾಫಿಟ್ಟೋನಿಯಾ.

ಘಾಡ ಹಸಿರು ಎಲೆಗಳ ಮೇಲೆ ಬೆಳ್ಳಿ ನರಗಳು; ಕಡು ಹಸಿರು ಎಲೆಗಳ ಮೇಲೆ ಕೆಂಪು ನರಗಳು; ತಿಳಿ ಗುಲಾಬಿ ಎಲೆಗಳ ಮೇಲೆ ಹಸಿರು ನರಗಳು; ನಿಯಾನ್ ಪಿಂಕ್, ಲೈಮ್ ಗ್ರೀನ್, ಫ್ಲೇಮ್ ಆರೆಂಜ್; ಹೀಗೆ ಕಾಂಟ್ರಾಸ್ಟಿಂಗ್ ಬಣ್ಣಗಳ ವೈವಿಧ್ಯಮಯ ವಿನ್ಯಾಸದ ಎಲೆ-ನರಗಳನ್ನು ಹೊಂದಿರುವ ಫಿಟ್ಟೋನಿಯಾ ಒಂದು ಹೆಸರಾಂತ ಒಳಾಂಗಣ ಸಸ್ಯ. ತವರೂರು ದಕ್ಷಿಣ ಅಮೇರಿಕಾದ ಪೆರು ಪ್ರದೇಶದ ಮಳೆಕಾಡು. ಅಲ್ಲಿನ ನಾಟಿ ಔಷಧಿಯಲ್ಲಿ ತಲೆ ನೋವಿನ ಶಮನಕ್ಕೆ ಪೀಟ್ಟೋನಿಯಾದ ಎಲೆಗಳು ಬಳಕೆಯಲ್ಲಿದ್ದವಂತೆ. 1867ರಲ್ಲಿ ಎಲಿಜಬೆತ್ ಮತ್ತು ಸಾರಾ ಫಿಟ್ಟಾನ್ ಎಂಬ ಸಹೋದರಿಯರು ತಮ್ಮ ಪುಸ್ತಕದಲ್ಲಿ ಪ್ರಥಮ ಬಾರಿ ಈ ಸಸ್ಯವನ್ನು ಜನಪ್ರಿಯಗೊಳಿಸಿದ್ದರು. ಗೌರವಾರ್ಥ ಮುಂದೆ ಈ ಸಸ್ಯಕುಲವನ್ನು ಫಿಟ್ಟೋನಿಯಾ ಎಂದೇ ನಾಮಕರಣ ಮಾಡಲಾಯಿತು.

ಉಷ್ಣವಲಯದ ನಿತ್ಯಹರಿದ್ವರ್ಣ ಕಾಡಿನ ಮಬ್ಬು ನೆಲದ ಈ ಸಸ್ಯಗಳು ಹೆಚ್ಚುಕಮ್ಮಿ ಇದೇ ವಾತಾವರಣವನ್ನು ಹೋಲುವ ಮನೆಯ ಒಳಾಂಗಣಕ್ಕೆ ಅನಾಯಾಸವಾಗಿ ಹೊಂದಿಕೊಳ್ಳಬಲ್ಲವು. ಕಾನು ಮಣ್ಣನ್ನೇ ಹೋಲುವ ಒಳ್ಳೆಯ ಪೋಷಕಾಂಶ ಭರಿತ ಗೊಬ್ಬರ ಮಿಶ್ರಿತ ಮಣ್ಣು ಸೂಕ್ತ.  ಬೆಚ್ಚನೆಯ ವಾತಾವರಣ, ಹೆಚ್ಚು ಆರ್ದ್ರತೆ, ಮಣ್ಣಿನಲ್ಲಿ ಹೆಚ್ಚಿನ ತೇವಾಂಶ ಇವುಗಳಿಗೆ ಇಷ್ಟದ ಸಂಗತಿ. ಮೆತ್ತನೆಯ ಕಾಂಡ, ಪೇಪರ್ ಎಲೆಗಳನ್ನು ಹೊಂದಿರುವ ಈ ಸಸ್ಯಗಳಿಗೆ ನೀರು ಎಂದರೆ ಪ್ರೀತಿ. ನೀರಿಲ್ಲದಿದ್ದರೆ ಬಾಡಿ ಬಗ್ಗಿ ಪ್ರತಿಕ್ರಿಯಿಸುತ್ತವೆ; ನೀರುಣಿಸಿದ ಕೂಡಲೇ ಅಷ್ಟೇ ಬೇಗನೆ ಚೇತರಿಸಗೊಳ್ಳುತ್ತವೆ. ಆರ್ದ್ರತೆ ಕಾಪಾಡಲು ನೀರನ್ನು ಸಿಂಪಡಿಸುವುದು, ಮಣ್ಣು ಪೂರ್ತಿಯಾಗಿ ಒಣಗದಂತೆ ನಿತ್ಯ ನಿಯಮಿತವಾಗಿ ಸಲ್ಪ ಸಲ್ಪವಾಗಿ ನೀರುಣಿಸುವುದು ಒಳಿತು. ಅತಿಯಾದ ನೀರಿನಿಂದ ಗಿಡಗಳು ಕೊಳೆಯುವುದನ್ನು ಗಮನದಲ್ಲಿರಿಸಬೇಕು. ಸದಾ ತೇವಾಂಶವಿರುವ ಅಡುಗೆಮನೆ, ಸ್ನಾನದ ಕೋಣೆಯಂತ ಸ್ಥಳಗಳಲ್ಲಿ ಇವು ಸೊಂಪಾಗಿ ಬೆಳೆಯಬಲ್ಲವು. ತೇವಾಂಶ ಇಷ್ಟಪಡುವ, ನಿಧಾನ ಬೆಳವಣಿಗೆ ಹೊಂದುವ ಕಾರಣ ಟೆರೆರಿಯಮ್ ಗೂ ಸೂಕ್ತ. ಮುಟ್ಟಿದರೆ ಪುಡಿಯಾಗುವ ಒಣಗಿದಂತ ಎಲೆಗೆ ಕಾರಣ ಆರ್ದ್ರತೆಯ ಕೊರತೆ . ತೀಕ್ಷ್ಣ ಬೆಳಕು ಎಲೆಗಳನ್ನು ಸುಡಬಲ್ಲವು, ಹಾಗಾಗಿ ಸಲ್ಪ ನೆರಳಿರುವ ಜಾಗವನ್ನು ಆಯ್ಕೆ ಮಾಡುವುದು ಒಳಿತು.

ಒಂದೊಂದೇ ಹೊಸ ಎಲೆಗಳನ್ನು ಹೊರಚಾಚುತ್ತಾ ನಿಧಾನಕ್ಕೆ ಬೆಳೆವ ಫಿಟ್ಟೋನಿಯಾ ಇತರೇ ಒಳಾಂಗಣ ಸಸ್ಯಗಳ ನಡುವೆ ಆಕರ್ಷಕ ಕಳೆಯೊಂದನ್ನು ತರಬಲ್ಲವು. ಬೇರೆಲ್ಲಾ ಒಳಾಂಗಣ ಸಸ್ಯಗಳಿಗೆ ಹೋಲಿಸಿದರೆ ಫಿಟ್ಟೋನಿಯಾಗಳ ಪೋಷಣೆ ಸ್ವಲ್ಪ ಕಷ್ಟವೇ. ಅವುಗಳ ಬೇಡಿಕೆ ಒಮ್ಮೆ ಅರ್ಥವಾದರೆ ಈ ಕೆಲಸ ಸುಲಭ ಮತ್ತು ಖುಷಿಕರ.



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ