ಝೀ಼ ಝೀ಼
ಶಹರಗಳಲ್ಲಿ ಆಗಷ್ಟೇ ಅಲಂಕಾರಿಕ ಗಿಡಗಳನ್ನು ಒಳಾಂಗಣದಲ್ಲಿಟ್ಟು ವಿನ್ಯಾಸಗೊಳಿಸುವ ‘ಅರ್ಬನ್ ಲ್ಯಾಂಡ್ ಸ್ಕೇಪಿಂಗ್’ ಶುರುವಾದ ಕಾಲ. ಅದೇ ಕಾಲದಲ್ಲಿ ನಮ್ಮ ನೆಲಕ್ಕೆ ಹೇಗೋ ‘ಝೀ಼ ಝೀ಼ ಪ್ಲಾಂಟ್’ಗಳು ಅವತರಿಸಿದ್ದವು. ಮೃದುವಾದ ಕಾಂಡ; ಕಾಂಡದ ದಂಟಿನ ಅಕ್ಕ ಪಕ್ಕ ಜೋಡಿಸಿಟ್ಟ ಕಡು ಹಸಿರು ಬಣ್ಣದ ‘ಪೋಲಿಷ್’ ಮಾಡಿರುವಂತೆ ಹೊಳೆಯುವ ದಪ್ಪನೆಯ ಎಲೆಗಳು; ನೋಟ, ಸ್ಪರ್ಷ ಎಲ್ಲವೂ ಕೃತಕತೆಯ ಅನುಭವ ಕೊಡುವ ಝೀ಼ ಝೀ಼ ಗಳು ಚಂದದ ಸಿರಾಮಿಕ್ ಕುಂಡದಲ್ಲಿ ಬೇರೂರಿದ್ದವು. ನಾನಂತೂ ಎಷ್ಟೊಂದು ಬಾರಿ ನೈಜ ಝೀ಼ ಝೀ಼ ಗಿಡಗಳನ್ನು ಕೃತಕವೆಂದು ತಿಳಿದು ಮೋಸ ಹೋಗಿದ್ದಿದೆ.

Comments
Post a Comment