ಮೀಮ್ ಕಥೆ

    ಬೆಳಗೆದ್ದು ಗರಿ ಗರಿ ದಿನಪತ್ರಿಕೆ ಹಿಡಿದು ಪ್ರಚಲಿತ ವಿದ್ಯಮಾನಗಳನ್ನು ಓದುವ ಕಾಲವೊಂದಿತ್ತು. ಈಗ ದಿನಪತ್ರಿಕೆಗಳ ಸ್ಥಾನವನ್ನು ಸ್ಮಾರ್ಟ್ ಫೋನ್ ಗಳು ಆಕ್ರಮಿಸಿವೆ. ತಾಸಿಗೊಮ್ಮೆ ಹೊಸ ಸುದ್ದಿಗಳನ್ನುರಿಫ್ರೆಶ್ ಮಾಡುವುದು ಒಂದು ರೀತಿಯ ಗೀಳಾಗಿಬಿಟ್ಟಿದೆ. ಹೀಗೇ ಮೊಬೈಲ್ ಪರದೆಯನ್ನು ಸ್ಕ್ರೋಲ್ ಮಾಡುತ್ತಿರುವಾಗ ನಮ್ಮ ಗಮನ ಸೆಳೆಯುವುದು ಸುದ್ದಿಗಳ ಮಧ್ಯೆ ಇಣುಕುವ, ವಿನೋದಮಯ ಕ್ಯಾರೆಕ್ಟರ್ ಪಂಚಿಂಗ್ ಸಾಲುಗಳ ಒಡನೆ ಮೂಡುವ ‘ಮೀಮ್ಗಳು (meme). ಪ್ರಚಲಿತ ಸುದ್ದಿಗಳು ಬಿತ್ತರವಾಗುವ ಮುನ್ನವೇ ಅವುಗಳನ್ನು ಗೇಲಿ ಮಾಡಿ ವೈರಲ್ ಆಗುವ  ‘ಮೀಮ್ಗಳು ಸಾಂಸ್ಕೃತಿಕಸಾಮಾಜಿಕರಾಜಕೀಯ ವಿಷಯಗಳನ್ನು ಹಾಸ್ಯಮಯವಾಗಿವಿಡಂಬನಾತ್ಮಕವಾಗಿ ವ್ಯಕ್ತಪಡಿಸುವ ಅಂರ್ಜಾಲ ಸಂಸ್ಕೃತಿಯಾಗಿಬಿಟ್ಟಿವೆ.

ಕ್ಷಣ ಹೊತ್ತಿನಲ್ಲಿ ಕೋಟ್ಯಾಂತರ ಡಿಜಿಟಲ್ ಪ್ರೇಕ್ಷಕರನ್ನು ತಲುಪಿ ‘ವೈರಲ್ ಆಗುವ ‘ಮೀಮ್ಗಳ ಅಸಲಿ ಕಥೆ ಕುತೂಹಲಕಾರಿಯಾಗಿದ್ದುನೆಟ್ಟಿಗರ ನೆಚ್ಚಿನ  ‘ಮೀಮ್ ಹುಟ್ಟಿದ್ದು ಜೀವಶಾಸ್ತ್ರದಲ್ಲಿ ಎಂದರೆ ಯಾರಿಗಾದರೂ ಆಶ್ಚರ್ಯವಾದೀತು.



ಮೀಮ್ ಹುಟ್ಟು

ಸಮಾಜದಲ್ಲಿ ಕೆಲ ಅಂಶಗಳು ವಂಶವಾಹಿನಿಗಳ ಆಧಾರವಿಲ್ಲದೆ ಒಂದು ತಲೆಮಾರಿನಿಂದ ಒಂದಕ್ಕೆ ಅನುಕರಣೆಯ ಮುಖಾಂತರ ಪ್ರಸಾರವಾಗುತ್ತವೆ. ಉದಾಹರಣೆಗೆ ಜನಪದ ಕಲೆ. ಎಲ್ಲಿಂದ ಹುಟ್ಟಿದವೋ ಯಾರಿಂದ  ಹುಟ್ಟಿದವೋ ಗೊತ್ತಿಲ್ಲ, ಆದರೆ ಬಾಯಿಂದ ಬಾಯಿಗೆ, ಜನರಿಂದ ಜನರಿಗೆ ಹರಡುತ್ತಾ ಇಡೀ ಸಮಾಜಕ್ಕೆ ಹಬ್ಬಿರುವ ಅಂಶಗಳು ಒಬ್ಬರಿಂದ ಒಬ್ಬರು ಅನುಕರಣಾ ಮಾದರಿಯಲ್ಲಿ ನೋಡಿ ಕಲಿತ ಸಂಪ್ರದಾಯಗಳು.  ಅಂತೆಯೇ ಬೇರೊಬ್ಬರ ಹಾವ-ಭಾವಗಳ ಅನುಕರಣೆ ಮಾನವನ ನಡವಳಿಕೆ. ಇನ್ನೂ ಶಾಲೆ ಮೆಟ್ಟಿಲೇರಿರದ ಸಣ್ಣ ಮಕ್ಕಳು ರಾಜ್ ಕುಮಾರ್ ರಂತೆ ಡೈಲಾಗ್ ಡೆಲಿವರಿ, ವಜ್ರಮುನಿಯಂತೆ ಅಟ್ಟಹಾಸ, ಶಂಕರ್ ನಾಗ್ ರಂತೆ ಕೈ ಬೀಸಿ ನಡೆಯುತ್ತಾ ಮಾಡುವ ವೀಡಿಯೋಗಳಂತು ತೀರಾ ಸಾಮಾನ್ಯ. ನಟರನ್ನು ನೋಡಿಯೂ ಇರದ ಮಕ್ಕಳಿಗೆ ಬಹುಶಃ ಅವರ ಪರಿಚಯವಾಗಿದ್ದು ತಂದೆ-ತಾಯಿ, ಅಜ್ಜ-ಅಜ್ಜಿಯರಿಂದ. ಮಹಾನ್ ನಟರು ಭೌತಿಕವಾಗಿ ನಮ್ಮಿಂದ ದೂರವಾಗಿ ದಶಕಗಳೇ ಕಳೆದಿದ್ದರೂ ಅವರ ಸ್ಟೈಲ್ ಅನುಕರಣೆ ಸಾವಿಲ್ಲದೆ ಮುಂದುವರೆಯುತ್ತಿದೆ. ನಾವು ಕೇವಲ ಇಂತಹ ಅನುಕರಣೆಗಳನ್ನು ಪ್ರಸಾರ ಮಾಡುತ್ತಿರುವ ಮುಂದಿನ ತಲೆಮಾರುಗಳು. 

ಇಂತಹ ಸಾಂಪ್ರದಾಯಿಕ ಕಲೆಗಳು, ನಟನಾ ಶೈಲಿಗಳು ಆನುವಂಶಿಕವಲ್ಲ. ಆದರೆ ವಂಶವಾಹಿಗಳಂತೆ ಕೆಲಸ ಮಾಡುತ್ತಾ ಮನುಷ್ಯನ ಮೆದುಳಿನ ರಚನಾತ್ಮಕ ವಿಕಸನಕ್ಕೆ ಕೊಡುಗೆ ಮಾಡುತ್ತಿರುವ ಅಂಶಗಳು. ಕೇವಲ ಜೀನ್ಸ್ ಗಳಲ್ಲದೇ ಸಂಸ್ಕೃತಿ-ಸಂಪ್ರದಾಯಕ್ಕೂ ವಿಕಸನದ ಹಾದಿಯನ್ನು ತಿದ್ದಿ ತೀಡುವ ಶಕ್ತಿಯಿದೆ ಎನ್ನುವುದು ಇದರಿಂದ ವಿದಿತ. ರೀತಿ ಜೀನ್ಸ್ ನಂತೆಯೇ ಪೀಳಿಗೆಯಿಂದ ಪೀಳಿಗೆಗೆ  ಹಬ್ಬುವ ಶಬ್ಧಗಳು,  ಭಾವಗಳು, ನಡಾವಳಿಗಳು, ನಂಬಿಕೆಗಳು, ಕಲ್ಪನೆಗಳನ್ನುಮೀಮ್ಗಳೆಂದು ಮೊದಲ ಬಾರಿ ಗುರುತಿಸಿದವರು ಜೀವ ವಿಕಸನ ಶಾಸ್ತ್ರದ ವಿಶ್ವಪ್ರಸಿದ್ಧ ವಿಜ್ಞಾನಿರಿಚರ್ಡ್ ಡಾಕಿನ್ಸ್.  ಡಾಕಿನ್ಸ್ ತಮ್ಮದಿ ಸೆಲ್ಫಿಷ್ ಜೀನ್  ಪುಸ್ತಕದಲ್ಲಿ ಪ್ರಪ್ರಥಮ ಬಾರಿಮೀಮ್ ಶಬ್ಧವನ್ನು ಪ್ರಯೋಗಿಸುತ್ತಾ ಜೀನ್ ನಂತೆಯೇ ಹರಡುವ ಸಾಂಸ್ಕ್ರತಿಕ ಪರಿಕಲ್ಪನೆಗಳು ಎಂದು ವ್ಯಾಖ್ಯಾನಿಸುತ್ತಾರೆ. ಮೀಮ್ ಪದದ ಮೂಲ ಗ್ರೀಕ್ ಮೈಮೀಮ್(mimeme), ಅರ್ಥಾತ್ ಅನುಕರಣೆ. ‘ಜೀನ್ ಪದ ಧ್ವನಿಸುವಂತೆ ಮೈಮೀಮ್ ಪದವನ್ನು ಚುಟುಕುಗೊಳಿಸಿಮೀಮ್ ಪದವನ್ನು ಡಾಕಿನ್ಸ್ ಬಳಸಿದರು. ಮುಂದೆ ಆಕ್ಸ್ ಫಡ್ ನಿಘಂಟುವಿನಲ್ಲೂ ಶಬ್ಧ ಮತ್ತು ವ್ಯಾಖ್ಯಾನವನ್ನು ಸೇರಿಸಲಾಯಿತು.

ಡಾಕಿನ್ಸ್ ದೃಷ್ಟಿಯಲ್ಲಿ ಮೀಮ್ ಗಳು

            ಡಾಕಿನ್ಸ್ ಪ್ರಕಾರ ಜೀನ್ ಗಳಿಗೂ ಮೀಮ್ ಗಳಿಗೂ ಬಹಳಷ್ಟು ಹೋಲಿಕೆಯಿದೆ, ಮತ್ತು ಜೀನ್ ಗಳಂತೆ ಮೀಮ್ ಗಳೂ ವಿಕಸನಕ್ಕೆ ಪ್ರಮುಖವಾದ  ಕಾರಣವೂ ಆಗಬಹುದಾಗಿವೆ. ಜೀನ್ ಗಳಂತೆ ಮೀಮ್ ಗಳೂ ಪೀಳಿಗೆಯಿಂದ ಪೀಳಿಗೆಗೆ ಹರಡುತ್ತಾ ರೂಪಾಂತರಿಯಾಗುತ್ತಾ (mutate), ಡಾರ್ವಿನ್ನನ ವಿಕಸನದ ಸಿದ್ಧಾಂತವಾದನೈಸಗಿಕ ಆಯ್ಕೆ (natural selection) ಗೆ ಒಳಪಡುತ್ತವೆ.  ಉದಾಹರಣೆ: ಪ್ರಾಥಮಿಕ ಶಾಲೆಯಲ್ಲಿ ನನ್ನ ತಂದೆ ಕಲಿಸಿಕೊಟ್ಟಓರಿಗಾಮಿ ಕಲೆಯನ್ನು ನಾನು ನನ್ನ ಸಹಪಾಠಿಗಳಿಗೆಲ್ಲಾ ಕಲಿಸಿದ್ದೆ. ನನ್ನ ತಂದೆಗೆ ಕರಕುಶಲ ಪಾಠದ ಸಮಯದಲ್ಲಿ ಅವರ ಶಿಕ್ಷಕರು ಕಲಿಸಿದ್ದರಂತೆ. ಹೀಗೆ ಗುರುಗಳಿಂದ ಕಲಿತ ವಿದ್ಯೆ ನನ್ನ ತಂದೆಗೂ, ಅವರ ಸಹಪಾಠಿಗಳಿಗೂ, ನನಗೂ, ನನ್ನ ಸಹಪಾಠಿಗಳಿಗೂ ಹರಡಿ ಈಗ ನನ್ನ ಮಕ್ಕಳಿಗೂ, ನನ್ನ ಸಹಪಾಠಿಗಳ ಮಕ್ಕಳಿಗೂ ತಲುಪಿದೆ. ಒಂದು ಮೆದುಳಿನಿಂದ ಇನ್ನೊಂದಕ್ಕೆ ನಕಲಾಗುತ್ತಾ, ಕೆಲವೊಮ್ಮೆ ತಪ್ಪಿನಿಂದ ರೂಪಾಂತರಿಯಾಗುತ್ತಾ, ಮೆದುಳಿನ ಸೃಜನಶೀಲ ಬೆಳವಣಿಗೆಗೆ ಕಾರಣವಾಗುತ್ತಾ ಸಾಗುತ್ತಿರುವ ಜಪಾನಿನ ಸಾಂಪ್ರದಾಯಿಕ ಕಲೆ ಮುಂದೊಮ್ಮೆ ಬಹುತೇಕ ಇಡೀ  ಸಮುದಾಯಕ್ಕೆ ತಲುಪುವ ಹಂತ ಸೇರುತ್ತದೆ ಮತ್ತುಮೀಮ್ ಎನಿಸಿಕೊಳ್ಳುತ್ತವೆ. 

ಇಂಟರ್ನೆಟ್ ಮೀಮ್ ಗಳು

ಸ್ವಾಭಾವಿಕವಾಗಿ ನೈರ್ಗಿಕವಾಗಿ ಪ್ರಸಾರವಾಗುವ ಜೀನ್ ಗಳಿಗೂ, ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡು ಹರಡುವ ಕಲ್ಚರಲ್ ಮೀಮ್(cultural meme)ಗಳಿಗೂ ಅಂತರ್ಜಾಲದಲ್ಲಿ ವೈರಲ್ ಆಗುವಇಂಟರ್ ನೆಟ್ ಮೀಮ್ಗಳಿಗೂ ವ್ಯತ್ಯಾಸವಿದೆ. ೨೦೧೩ ರಲ್ಲಿ ಡಾಕಿನ್ಸ್ ತನ್ನ ಮೀಮ್ ಪದದ ವ್ಯಾಪಕ ಅಂತರ್ಜಾಲ ಬಳಕೆಯನ್ನು ಕಂಡುಮಾನವನ ಹಸ್ತಕ್ಷೇಪದಿಂದ, ಕಾಲ್ಪನಿಕತೆಯಿಂದ ರೂಪುಗೊಂಡು ಅನುಕರಣೆ ಮೂಲಕ ಪುನರಾವರ್ತಿತವಾಗುವ ಮಾಹಿತಿಯ ತುಣುಕನ್ನುಇಂಟರ್ನೆಟ್ ಮೀಮ್ಗಳೆಂದು ಕರೆದಿದರು. ನಗು, ಅಳು, ಸಿಟ್ಟು, ಸಿಡುಕು ಇತ್ಯಾದಿ ಭಾವನೆಗಳನ್ನು ಬಿಂಬಿಸುವಎಮೋಜಿ ಕೂಡಾ ಮೀಮ್ ರೂಪಾಂತರಿ.

ಮಾನವ ದೇಹವು

ಮಾನವರಿಗೂ ಮಂಗಗಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ನಮ್ಮ ಅತ್ಯಂತ ಹತ್ತಿರದ ಸಂಬಂಧಿಗಳಾದ ಚಿಂಪಾಂಜಿಗಳಿಗೂ ನಮಗೂ ಜೀನ್ ರಚನೆಯಲ್ಲಿ 98.8% ಸಾಮ್ಯತೆಯಿದೆ. ಉಳಿದೆಲ್ಲಾ ಜೀವಿಗಳಂತೆ ಮಾನವ ದೇಹವು ಮೂಳೆ ಮಾಂಸದ ತಡಿಕೆ. ಆದರೂ ಮಾನವ ಜೀವಿಗಳು ನಿರ್ಗದ  ಅದ್ಭುತ ಸೃಷ್ಟಿ. ಕಾರಣ ಮಾನವ ಬುದ್ಧಿ ಜೀವಿ. ಮಾನವನ ಸೃಜನಶೀಲತೆಯಿಂದ ಹೀಗೆ ಹಂತ ಹಂತವಾಗಿ ಜೀವ ವಿಜ್ಞಾನದಲ್ಲಿ ಉಗಮವಾದ ಕಲ್ಪನೆಯೊಂದು ಸಮಾಜ ವಿಜ್ಞಾನದ ಭಾಗವಾಗಿ, ಮುಂದುವರೆದು ಡಿಜಿಟಲ್ ವೇದಿಕೆ ಏರಿದ್ದು ಆಶ್ಚರ್ಯಕರ.

ಮನೋರಂಜಕವಾಗಿಯೂ, ಹಾಸ್ಯಮಯವಾಗಿಯೂ, ಸ್ಪೂರ್ತಿದಾಯಕವಾಗಿಯೂ ಕಾಣುವ ಮೀಮ್ ಗಳು ಕೆಲವೊಮ್ಮೆ ಪ್ರಸಿದ್ಧ ವ್ಯಕ್ತಿಗಳ ಮನಸ್ಸು ನೋಯಿಸಿ, ಸಮಾಜಘಾತುಕವಾಗಿದ್ದೂ ಇದೆ. ಇದ್ದ ಬದ್ದಕ್ರಿಯೇಟಿವಿಟಿ ಒಗ್ಗೂಡಿಸಿ ಹಗಲು ರಾತ್ರಿ ಒಂದು ಮಾಡಿ ಮೀಮ್ಸ್ ಗಳನ್ನು ಸೃಷ್ಟಿಸಿಟ್ರೋಲ್ ಮಾಡುವ ಒಂದು ಜನಾಂಗವೇ ಸೃಷ್ಟಿಯಾಗಿದೆ. ಕೆಲವರ ಪಾಲಿಗೆ ಇದು ಸಮಯ ಕೊಲ್ಲುವ ರಾಕ್ಷಸನಾದರೆ, ಮತ್ತೆ ಕೆಲವರಿಗೆ ಹಣ ಗಳಿಸುವ ಮಾರ್ಗವಾಗಿದ್ದೂ ಇದೆ. ಹೆಚ್ಚೇನೂ ಮಾಡದೇ ಬರೀ ಸ್ಕ್ರೋಲ್ ಮಾಡಿ ಫಾರ್ವರ್ಡ್ ಶೇರ್ ಮಾಡುವ ನಾವು ಅಪ್ರತ್ಯಕ್ಷವಾಗಿ ವಿಕಸನದ ಅಂಗವಾಗಿದ್ದೇವಷ್ಟೆ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ