ಹಕ್ಕಿ ಪಿಕ್ಕಿಗಳ ಶಿಸ್ತಿನ ಸಾಲು
Why do birds fly in V shape! Discover this amazing nature engineering ಹಕ್ಕಿ ಪಿಕ್ಕಿಗಳ ಶಿಸ್ತಿನ ಸಾಲು ಸುನೀಲ ಆಕಾಶದಲ್ಲಿ ತಿಳಿಗೆಂಪು ಬಣ್ಣ ರಂಗೇರಿ ಸಂಧ್ಯಾ ಕಾಲದ ಸೂಚನೆಯಾಗುತ್ತಿದ್ದಂತೆ ಮನೆ ಸೇರುವ ಧಾವಂತದಲ್ಲಿ ಹಾರುವ ಹಕ್ಕಿಗಳ ಕುಟುಂಬವನ್ನು ಎಲ್ಲರೂ ಕಂಡೆ ಇರುತ್ತೀರಾ. ಅತ್ಯಂತ ಸಹಜವೇನೋ ಎಂಬಂತೆ V ವಿನ್ಯಾಸದಲ್ಲಿ ಒಬ್ಬರ ಹಿಂದೆ ಒಬ್ಬರಾಗಿ ಅಚ್ಚುಕಟ್ಟಾಗಿ ಚಲಿಸುವ ಖಗಗಳ ಈ ನಡವಳಿಕೆಯನ್ನು ಪ್ರಶ್ನಿಸಿದ್ದಿದೆಯೇ!? V ಆಕಾರದ ಸಮಮಿತಿಯ ( symmetric ) ಹಾರಾಟ ಬಾತುಕೋಳಿ, ಕೊಕ್ಕರೆ ಮುಂತಾದ ಮೈಲು ದೂರ ವಲಸೆ ಹೋಗುವ ಪಕ್ಷಿಗಳಲ್ಲಿ ಕಂಡುಬರುವ ವರ್ತನೆ. ಏಕೀ ವರ್ತನೆ!? ಎಂಬ ಪ್ರಶ್ನೆಯ ಹಿಂದೆ ಬಿದ್ದ ‘ಲಂಡನ್ನ ರೋಯಲ್ ವೆಟರ್ನರಿ ಕಾಲೇಜ್ನ’ ವಿಜ್ಞಾನಿಗಳು ಕಾರಣ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರಿಯಾದಲ್ಲಿ ಸೆರೆಯಲ್ಲಿ ಸಾಕಿದ ಅಳಿವಿನಂಚಿನಲ್ಲಿರುವ ಸ್ಥಳೀಯ ‘ ನೊರ್ತರ್ನ್ ಬಾಲ್ಡ್ ಇಬಿಸಿಸ್ ’ ( northern bald ibises ) ಎನ್ನುವ ಪಕ್ಷಿಗಳ ಹಿಂಡಿನ ಮೇಲೆ ಈ ಪ್ರಯೋಗವನ್ನು ಮಾಡಲಾಯಿತು. 14 ಪಕ್ಷಿಗಳನ್ನು ಒಳಗೊಂಡ ಸಮೂಹದ ಮೇಲೆ 43 ನಿಮಿಷದ ವಲಸೆಯ ಹಾರಾಟದ ಅವಧಿಯಲ್ಲಿ ಪ್ರತಿ ಪಕ್ಷಿಯ ಪ್ರತಿ ರೆಕ್ಕೆ ಬಡಿತದ ವಿನ್ಯಾಸ, ಸಮಯವನ್ನು ತುಂಬಾ ಸೂಕ್ಷ್ಮವಾಗಿ ಅತ್ಯಂತ ನಿಖರ ಜಿ.ಪಿ.ಎಸ್ ಸೆನ್ಸರ್ಸ್ ಸಹಾಯದಿಂದ ಗಮನಿಸದ ವಿಜ್ಞಾನಿಗಳಿಗೆ ಸಿಕ್ಕ ಫಲಿತಾಂಶ ಅವರ ಹುಬ್ಬೇರಿಸುವಂತೆ ಮಾಡ...