ಫಿಟ್ಟೋನಿಯಾ ವರ್ಣ ವೈವಿಧ್ಯ
ಮನುಷ್ಯನ ಅಂಗಾಂಗಕ್ಕೂ ಸಸ್ಯಗಳ ಹೂವು ಕಾಯಿಗೂ ಏನೋ ಹೇಳಿತೀರದ ಸಂಬಂಧ . ಮೆದುಳಿನಂತ ಅಕ್ರೂಟ್ , ಕಿಡ್ನಿಯಂತ ಅವರೆ , ಲೇಡಿಸ್ ಫಿಂಗರ್ ನಂತ ಬೆಂಡೆ , ಕಮಲದಂತ ನಯನ , ತೊಂಡೆಯಂತ ತುಟಿ , ದಾಳಿಂಬೆಯಂತ ಹಲ್ಲು , ಬ್ಲೀಡಿಂಗ್ ಹಾರ್ಟ್ ಬಳ್ಳಿ , ಹೀಗೆ ಈ ಪಟ್ಟಿ ಅಂತ್ಯವಿಲ್ಲದೇ ಸಾಗಬಲ್ಲದು . ಇದಕ್ಕೊಂದು ಸೇರ್ಪಡೆ ನರನಾಡಿಗಳ ವ್ಯೂಹವನ್ನು ಹೋಲುವ ಎಲೆಗಳುಳ್ಳ ‘ ನರ್ವ್ ಪ್ಲಾಂಟ್ ’ ಅಥವಾ ‘ ಫಿಟ್ಟೋನಿಯಾ ’ . ಘಾಡ ಹಸಿರು ಎಲೆಗಳ ಮೇಲೆ ಬೆಳ್ಳಿ ನರಗಳು; ಕಡು ಹಸಿರು ಎಲೆಗಳ ಮೇಲೆ ಕೆಂಪು ನರಗಳು; ತಿಳಿ ಗುಲಾಬಿ ಎಲೆಗಳ ಮೇಲೆ ಹಸಿರು ನರಗಳು; ನಿಯಾನ್ ಪಿಂಕ್, ಲೈಮ್ ಗ್ರೀನ್, ಫ್ಲೇಮ್ ಆರೆಂಜ್; ಹೀಗೆ ಕಾಂಟ್ರಾಸ್ಟಿಂಗ್ ಬಣ್ಣಗಳ ವೈವಿಧ್ಯಮಯ ವಿನ್ಯಾಸದ ಎಲೆ-ನರಗಳನ್ನು ಹೊಂದಿರುವ ಫಿಟ್ಟೋನಿಯಾ ಒಂದು ಹೆಸರಾಂತ ಒಳಾಂಗಣ ಸಸ್ಯ. ತವರೂರು ದಕ್ಷಿಣ ಅಮೇರಿಕಾದ ಪೆರು ಪ್ರದೇಶದ ಮಳೆಕಾಡು. ಅಲ್ಲಿನ ನಾಟಿ ಔಷಧಿಯಲ್ಲಿ ತಲೆ ನೋವಿನ ಶಮನಕ್ಕೆ ಪೀಟ್ಟೋನಿಯಾದ ಎಲೆಗಳು ಬಳಕೆಯಲ್ಲಿದ್ದವಂತೆ. 1867ರಲ್ಲಿ ಎಲಿಜಬೆತ್ ಮತ್ತು ಸಾರಾ ಫಿಟ್ಟಾನ್ ಎಂಬ ಸಹೋದರಿಯರು ತಮ್ಮ ಪುಸ...