ಪ್ರಕೃತಿಗೂ ಕಾನೂನು ಹಕ್ಕಿರಲಿ
ಅದೊಂದು ನದೀ ಪಾತ್ರ; ‘ಮನು’ ಎಂದಿನಂತೆ ತನ್ನ ಧಾರ್ಮಿಕ ವಿಧಿಗಳನ್ನು ಆಚರಿಸುತ್ತಿದ್ದ ಸಮಯ; ಪುಟ್ಟ ಮೀನೊಂದು ಬಳಿ ಬಂದು ದೊಡ್ಡ ದೊಡ್ಡ ಮೀನುಗಳಿಂದ ತನಗೆದುರಾದ ಜೀವ ಭಯದ ಬಗ್ಗೆ ಮನವಿ ಮಾಡಲು ಮರುಗಿದ ಮನು ಅದನ್ನು ಪಾತ್ರೆಯಲ್ಲಿಟ್ಟು ಬೆಳೆಸುವ ಭರವಸೆಯಿತ್ತ. ದಿನದಿಂದ ದಿನಕ್ಕೆ ಬೃಹತ್ತಾಗಿ ಬೆಳೆದ ಮೀನು ನದಿ ಸೇರುವ ಮುನ್ನ ಪ್ರಳಯವೊಂದರ ಮುನ್ಸೂಚನೆ ನೀಡಿ ದೊಡ್ಡದೊಂದು ನೌಕೆ ಕಟ್ಟಿ ತಯಾರಿರುವಂತೆ ಮನುವಿಗೆ ಸೂಚನೆ ನೀಡಿತು. ಅದರಂತೆ ಇಡೀ ಭೂಮಿಯನ್ನೇ ನುಂಗಿದ ಬೃಹತ್ ಪ್ರಳಯದಲ್ಲಿ ಮನು ಸಪ್ತರ್ಷಿಗಳು, ಜೀವ ಜಂತುಗಳು, ಧಾನ್ಯ ಬೀಜ ತುಂಬಿದ ನೌಕೆಯನ್ನು ಮೀನಿನ ಮೂತಿಗೆ ಸಿಕ್ಕಿಸಿ ಸುರಕ್ಷಿತ ಸ್ಥಳವೊಂದಕ್ಕೆ ಪ್ರಯಾಣ ಬೆಳೆಸಿದ. ಇದೇ ವಿಷ್ಣುವಿನ ದಶಾವತಾರಗಳಲ್ಲಿ ಮೊದಲ ಮತ್ಸಾö್ಯವತಾರ; ಮನುವಿನ ಜನಾಂಗವೇ ಮಾನವರಾದ ನಾವು ಎಂದು ಅಜ್ಜಿ ಕಥೆ ಹೇಳುವಾಗ ಕಣ್ಣು ಬಾಯಿ ಬಿಟ್ಟು ಕೇಳುತ್ತಿದ್ದೆವು. ಈಗ ಡೈನೋಸಾರ್‌ಗಳ ಅಳಿವಿನ ನಂತರದ ಆರನೇ ಸಾಮೂಹಿಕ ಪ್ರಕೃತಿಯ ಅಳಿವಿನ ಮಧ್ಯದಲ್ಲಿ ನಾವಿದ್ದೇವೆ. ಮಾನವ ಹಸ್ತಕ್ಷೇಪದಿಂದ ದಿನಕ್ಕೆ ಸರಾಸರಿ ನೂರು ಸ್ಪೀಶೀಸ್‌ಗಳು ಅಳಿಯುತ್ತಿವೆ. ಕಳೆದೆರಡು ಶತಮಾನದಲ್ಲಿ ನಮಗೆ ತಿಳಿದಿರುವ ಐವತ್ತೈದು ಕಶೇರುಕ ಜೀವಿ ಕುಲಗಳು(ಜೀನಸ್) ಆರು ನೂರು ಸಸ್ಯ ಜಾತಿಗಳು(ಸ್ಪೀಶಿಸ್) ಅಳಿದುಹೋಗಿವೆ. ಬರೀ ಇನ್ನೂರು ವರ್ಷಗಳಲ್ಲಿ ಇಷ್ಟೆಲ್ಲಾ ಜೀವವೈವಿಧ್ಯತೆಯ ನಷ್ಟ ಅಪಾಯಕಾರಿಯಾಗಿದೆ. ಕದನಗಳು ಅಣ್ವಸ್ತ್ರಗಳು ಈ ಸಮಸ್...