ಮನೆಯೊಳಗೊಂದು ಹರಟೆ ಕಟ್ಟೆ
ಮನೆಯೊಳಗೊಂದು ಮರವ ಬೆಳೆಸಿ : ಇತ್ತೀಚೆಗೆ ಹೋಟೆಲ್, ರೆಸಾರ್ಟ್, ಸ್ಟಾರ್ ಸೆಲೆಬ್ರೆಟಿಗಳ ಐಷಾರಾಮಿ ಬಂಗಲೆಗಳಲ್ಲಿ ಎತ್ತರದ ಛಾವಣಿ ಸಾಮಾನ್ಯ ಅಂಶ. ಈ ‘ಹೈ ಸೀಲಿಂಗ್’ ಪರಿಕಲ್ಪನೆ ಮನೆಯೊಳಗಡೆ ವಿಶಾಲ ಜಾಗವನ್ನು ಕಲ್ಪಿಸುವುದಲ್ಲದೇ ಸಾಕಷ್ಟು ಗಾಳಿ ಬೆಳಕಿಗೂ ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಇಂತಹ ಕಟ್ಟಡಗಳಲ್ಲಿ ಇತರೇ ಒಳಾಂಗಣ ಸಸ್ಯಗಳೊಂದಿಗೆ ಮರವೂ ಸೇರಿರುವುದನ್ನು ಗಮನಿಸಬಹುದು. ಈಗೀಗ ಇಂತದ್ದೇ ಕಲ್ಪನೆಗೆ ರೆಕ್ಕೆ ಪುಕ್ಕ ಕೊಡುವ ಒಳಾಂಗಣ ವಿನ್ಯಾಸದ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಅದೇ ಜಗಲಿಯೊಳಗಣ ಹರಟೆ ಕಟ್ಟೆ. ಖಾಲಿ ಗೋಡೆಯ ಕಾನ್ವಾಸ್ ನ ಮೇಲೆ ಹಸಿರು ಗಿಡ ಮರಗಳ ನೈಸರ್ಗಿಕ ಲೈವ್ ಆರ್ಟ್ ಇಂದು ಎಲ್ಲರ ಇಷ್ಟದ ಕಲಾತ್ಮಕತೆಯಾಗಿದೆ. ಮನೆಯೊಳಗಣ ಮರ ಹಸಿರು ಪ್ರೀತಿಯಷ್ಟೇ ಅಲ್ಲದೇ ಕ್ಷೇಮ-ಆರೋಗ್ಯವನ್ನು, ಮಾನಸಿಕ ಸಂತುಲತೆಯನ್ನು ವರ್ಧಿಸುತ್ತದೆ. ಹಾಗಾಗಿ ಪಟ್ಟಣದ ವೆಲನೆಸ್ ಸೆಂಟರ್, ಮೆಡಿಟೇಶನ್ ಸೆಂಟರ್ ಗಳಲ್ಲಂತೂ ಒಳಾಂಗಣದ ಮರದ ಕಟ್ಟೆಗಳು ಕಡ್ಡಾಯವೇನೋ ಅನ್ನುವಷ್ಟು ಪ್ರಸಿದ್ಧ. ಎಲ್ಲ ಮರಗಳು ಸಲ್ಲ: ಮನೆಯೊಳಗೆ ಮರ ಬೆಳೆಸಬೇಕೆಂದು ಕಾಡಿನ ಮರವೊಂದರ ಸಸಿಯನ್ನು ತಂದು ನೆಡಲು ಸಾಧ್ಯವಿಲ್ಲ. ಕಾಡು ಮರಗಳ ಬದುಕು, ಬೆಳವಣಿಗೆ, ಸಂಪನ್ಮೂಲಗಳ ಬಳಕೆಯ ರೀತಿ ಒಳಾಂಗಣಕ್ಕೆ ಒಪ್ಪುವಂತದ್ದಲ್ಲ. ಈ ನಿಟ್ಟಿನಲ್ಲಿ ಒಳಾಂಗಣಕ್ಕೆ ಸೂಕ್ತವಾದ ಮರಗಳ ಆಯ್ಕೆ ಮೊದಲ ಹಂತದ್ದಾಗಬೇಕು. ನಂತರದ್ದು ಸಮೃದ್ಧ ಬೆಳಕಿರುವ ಸ್ಥಳದ ಆಯ್ಕೆ. ಅರ...