ಮನೆಗೆ ಮನಸ್ಸಿಗೆ ಡಿಟಾಕ್ಸ್ ತುಳಸಿ
ಜಲಂಧರನೆಂಬ ರಾಕ್ಷಸನ ಪತಿವ್ರತೆ ಪತ್ನಿ, ವಿಷ್ಣುವಿನ ಪರಮಭಕ್ತೆ 'ವೃಂದಾ' ದೇವಾಸುರರ ಯುದ್ಧದಲ್ಲಿ ವಿಷ್ಣುವಿನ ಮಾರುವೇಷಕ್ಕೆ ಮೋಸಹೋಗಿ ಅಪವಿತ್ರರಾದೆಳೆಂದು ಅಗ್ನಿಗಾಹುತಿಯಾಗಿ ಸಸ್ಯವಾಗಿ ಪುನಃಜನ್ಮ ತಳೆದವಳು; ಲಕ್ಷ್ಮೀಯ ರೂಪವಾಗಿ, ವಿಷ್ಣುವಿನ ಮಡದಿಯಾಗಿ, ಪ್ರತಿ ಮನೆಯಲ್ಲೂ ನೆಲೆಸಿರುವವಳು 'ತುಳಸಿ'. ಬುಡದಲ್ಲಿ ಸರ್ವ ತೀರ್ಥಗಳು, ಮಧ್ಯದಲ್ಲಿ ಸರ್ವ ದೇವತೆಗಳು, ತುದಿಯಲ್ಲಿ ಸರ್ವ ವೇದಗಳನ್ನು ಒಳಗೊಂಡಿರುವAತೆ ಈ ಸಸ್ಯವನ್ನು ಪೂಜಿಸಲಾಗುತ್ತದೆ. ಪುರಾಣ ಕಥೆಗಳು ಸತ್ಯವೋ ಮಿಥ್ಯವೋ, ಆದರೆ ಸಸ್ಯವೊಂದನ್ನು ಈ ಮಟ್ಟಕ್ಕೆ ಗೌರವಿಸಲಾಗುತ್ತದೆಂದರೆ ಅದಕ್ಕೆ ಕಾರಣ ಆ ಸಸ್ಯದಿಂದಾಗುವ ಅಗಾಧ ಅನುಕೂಲಗಳು. ಅಲಂಕಾರಿಕವಾಗಿ ಗಾರ್ಡನ್ ನಲ್ಲಿ, ಕೆಲವೆಡೆ ಅಡುಗೆಗೂ ಬಳಕೆಯಲ್ಲಿರುವ ತುಳಸಿಯ ಓಷಧೀಯ ಗುಣಗಳಂತೂ ಪಟ್ಟಿ ಮಾಡಲಾಗದಷ್ಟು ಅಧಿಕ. ತುಳಸಿ ನಮ್ಮ ಮನೆ-ಮನಸ್ಸು ಎರಡನ್ನೂ ಡಿಟಾಕ್ಸ್ ಮಾಡಬಲ್ಲದು. ಆದ್ದರಿಂದ ಮನೆ ಎದುರೇ ಕೈಗೆಟುಕುವ ದೂರದಲ್ಲಿ ಈ ಸಸ್ಯವನ್ನು ಬೆಳೆಸುವ ಹಿರಿಯರ ರೂಢಿ ಅತ್ಯಂತ ಸಮಂಜಸ. ಪುದೀನಾ, ಕಾಮಕಸ್ತೂರಿ ಸಸ್ಯಗಳ ಕುಟುಂಬಕ್ಕೆ ಸೇರಿದ ತುಳಸಿಯಲ್ಲಿ ಹಲವಾರು ಬಗೆ. 'ಹೋಲಿ ಬೆಸಿಲ್', ಓಸಿಮಮ್ ಸ್ಯಾಂಕ್ಟಮ್ (ಟೆನುಫ್ಲೋರಮ್) ಎಂದು ಕರೆಯಲ್ಪಡುವ (ಸ್ಯಾಂಕ್ಟಮ್ ಎಂದರೆ ಪವಿತ್ರವಾದ ಸ್ಥಳವೆಂಬ ಅರ್ಥವಿದೆ) ಹಸಿರು ಎಲೆಯ ರಾಮ ತುಳಸಿಯನ್ನು ಮತ್ತು ಕಪ್ಪು ಎಲೆಯ ಕೃಷ್ಣ ತುಳಸಿಯನ್ನು ಭಾರತದೆಲ್ಲೆ...