ಭಾರತದ ಸ್ವಂತದ ಕ್ರಿಸ್ಪರ್ ಭತ್ತ
ಅಂತೂ ಈ ದಿನ ಬಂತು! ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಶ್ರಮಜೀವಿಯ ಇದೇ ವೇದಿಕೆಯಲ್ಲಿ ಕುಲಾಂತರಿಯ ಚರ್ಚೆ ಮುನ್ನೆಲೆಗೆ ಬಂದಾಗ ʼ ಕುಲಾಂತರಿ ಹಳೆಯದು ; ಬಂದಿದೆ ಅದರಪ್ಪ ಕ್ರಿಸ್ಪರ್ ʼ ಎಂಬ ಲೇಖನವೊಂದನ್ನು ನಾನು ಬರೆದಿದ್ದೆ. ಶ್ರಮಜೀವಿ ಸಂಪಾದಕರು ನನ್ನ ಅಂಕಣಕ್ಕೆ ʼಸೀಮಾತೀತʼ ಎಂದು ಹೆಸರಿಟ್ಟು ʼಸಾಮಾನ್ಯ ಕೃಷಿಕರಿಗಲ್ಲಾʼ ಎಂಬ ಟ್ಯಾಗ್‌ಲೈನ್ ಕೊಟ್ಟಿಬಿಟ್ಟಿದ್ದಾರೆ. ಆದರೂ ನವೆಂಬರ್ 2024ರ ಸಂಚಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ನೀವೇನಾದರೂ ಓದಿ (ಕಷ್ಟಪಟ್ಟು!?) ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದರೆ ಈಗ ಅದನ್ನು ʼಸೆಲಬ್ರೇಟ್ʼ ಮಾಡುವ ದಿನ. ಕ್ರಿಸ್ಪರ್ ಬಂದಾಗಿದೆ! ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಣ್ಣ ಹೆಡ್ಡಣ್ಣರೆಲ್ಲಾ ಮೈ ಮುಟ್ಟಿ ನೋಡಿಕೊಳ್ಳುವಂತ ಸಾಧನೆಯನ್ನು ಭಾರತ ಮಾಡಿ ತೋರಿಸಿದೆ. ಈ ಸಲ ಎಂದಿನಂತೆ ಬಾಹ್ಯಾಕಾಶ, ವೈದ್ಯಕೀಯ, ರಕ್ಷಣಾ ಕ್ಷೇತ್ರದಲ್ಲಲ್ಲ, “ಕೃಷಿ ಕ್ಷೇತ್ರದಲ್ಲಿ” ̤ ಅದೂ ಸದ್ದು ಗದ್ದಲವಿಲ್ಲದೆ ಆಡಂಬರದ ವೈಭವೀಕರಣವಿಲ್ಲದೆ. ಮೇ ನಾಲ್ಕರಂದು ನವದೆಹಲಿಯ ʼನ್ಯಾಶನಲ್ ಅಗ್ರಿಕಲ್ಚರಲ್ ಸೈನ್ಸ್ ಕಾಂಪ್ಲೆಕ್ಸ್ʼನ ʼ ಭಾರತರತ್ನ ಸಿ.ಸುಬ್ರಹ್ಮಣ್ಯಂ ಸಭಾಂಗಣʼದಲ್ಲಿ, ರೈತರು-ಯುವವಿದ್ಯಾರ್ಥಿಗಳು-ವಿಜ್ಞಾನಿಗಳ ಸಮ್ಮುಖದಲ್ಲಿ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ʼಡಿ.ಆರ್.ಆರ್ ರೈಸ್ 100ʼ ಅಥವಾ ʼಕಮಲಾʼ ( DRR Rice 100/Kamla) ಮತ್ತು ʼಪೂಸಾ ಡಿ.ಎಸ್.ಟಿ ರೈಸ್ ...