Posts

Showing posts from May, 2025

ಹುಟ್ಟದ ಬೀಜದ ಬೆನ್ನು ಹತ್ತಿ ಭಾಗ 2

Image
ಸಮೃದ್ಧ ಕೈತೋಟವೊಂದರ ಯಶಸ್ಸು ಅಡಗಿರುವುದು ಬೀಜದಲ್ಲಿ. ನೀರು ಹಾಕಿ, ಗೊಬ್ಬರ ಕೊಟ್ಟು, ಎಷ್ಟೇ ಆರೈಕೆ ಮಾಡಿದರೂ ಬೀಜ ಕೈಕೊಟ್ಟರೆ ಕೈತೋಟ ಸೋಲುತ್ತದೆ. ಬೀಜ ಕೆಡುವುದರ ಹಿಂದಿನ ಹಲವಾರು ಕಾರಣಗಳನ್ನು ಹೇಳುತ್ತಾ ಕಳೆದ ಸಂಚಿಕೆಯಲ್ಲಿ ಪ್ರಮಾಣೀಕೃತ ಬೀಜದ ವರ್ಗೀಕರಣದ ಬಗ್ಗೆ, ಬೀಜದ ಮೊಳಕೆಪ್ರಮಾಣ, ಜೀವಿತಾವಧಿ, ಬಗ್ಗೆ ಚರ್ಚಿಸಲಾಗಿತ್ತು. ಬೀಜಗಳ ಗುಣಮಟ್ಟವನ್ನು ನಿರ್ಧರಿಸುವ ಇನ್ನಿತರೇ ಅಂಶಗಳಾದ ಬೀಜಗಳ ರಚನೆ, ಬೀಜಗಳಲ್ಲಿರುವ ತೇವಾಂಶ, ಬೀಜಗಳನ್ನು ಶೇಖರಿಸಿದ ರೀತಿ, ಬೀಜದ ಆರೋಗ್ಯ, ಬೀಜ ಮೊಳಕೆಯೊಡೆಯುಲು ಬೇಕಾದ ಸೂಕ್ತ ವಾತಾವರಣ ಮುಂತಾದ ವಿಷಯಗಳ ಬಗ್ಗೆ ಈ ಸಂಚಿಕೆಯಲ್ಲಿ ವಿವರವಾಗಿ ನೋಡೋಣ. ಬೀಜಗಳ ಸುಪ್ತಾವಸ್ಥೆ ಮತ್ತು ಮೊಳಕೆಯೊಡೆಯುವಲ್ಲಿ ಬೀಜದ ರಚನೆಯ ಪಾತ್ರ ಕಲ್ಲಂಗಡಿ, ಕುಂಬಳ ಬೀಜಗಳಿಗೆ ಮೇಲೊಂದು ಅಂಗಿ ಇರುವುದನ್ನು ಗಮನಿಸಿರುತ್ತೀರಾ. ಈ ಮೇಲಂಗಿ ಸುಲಿದು ಒಳಗಿನ ಬೀಜಗಳನ್ನು ತಿನ್ನುವುದುಂಟು. ಒಳಗಿನ ಭ್ರೂಣಕ್ಕೆ ರಕ್ಷಣೆ ಕೊಡುವ ಈ ಬೀಜ ಕವಚ (ಸೀಡ್‌ ಕೋಟ್)‌ ಮೊಳಕೆಯೊಡೆಯುವಿಕೆ ದೃಷ್ಟಿಯಿಂದ ಬಹಳ ಮುಖ್ಯ. ಬೀಜ ಕವಚ ದಪ್ಪವಾಗಿದ್ದಲ್ಲಿ ಸಹಜವಾಗಿ ನೀರು ಹೀರಿಕೊಳ್ಳುವಿಕೆ ಕಷ್ಟವಾಗುತ್ತದೆ, ಬೀಜದೊಳಗಿರುವ ಭ್ರೂಣದ ಉಸಿರಾಟಕ್ಕೂ ಅಡಚಣೆಯಾಗುತ್ತದೆ. ಮೊಳಕೆಯೊಡೆಯುವಿಕೆಯೂ ನಿಧಾನವಾಗುತ್ತದೆ. ಹಾಗಾಗಿ ನಮ್ಮಲ್ಲಿ ಕಲ್ಲಂಗಡಿ ಕುಂಬಳ ಬೀಜವನ್ನು ಹಿತ್ತಲಲ್ಲಿ ಬಿತ್ತುವ ಮೊದಲು ಒಂದು ರಾತ್ರಿ ಹಾಲಿನಲ್ಲಿ ನೆನೆಹಾಕುವ ರೂ...