ಕುಲಾಂತರಿ ಹಳೆಯದು ಇದು ಕ್ರಿಸ್ಪರ್ ಕ್ರಾಂತಿಯ ಕಾಲ
ಕಳೆದೆರಡು ತಿಂಗಳಿನಿಂದ ಶ್ರಮಜೀವಿ ಪತ್ರಿಕೆ ಮತ್ತು ನೇರ ಪ್ರಸಾರಗಳಲ್ಲಿ ಕುಲಾಂತರಿ ಬೆಳೆಗಳ ಬಗ್ಗೆ ಚರ್ಚೆ-ವಿಚರ್ಚೆ ನಡೆಯುತ್ತಿತ್ತು. ಸಾರ್ವಜನಿಕ ವಲಯದಲ್ಲಿ ಈ ವಾದ ವಿವಾದ ಇಂದು ನಿನ್ನೆಯದಲ್ಲ ; ದಶಕಗಳಷ್ಟು ಹಳೆಯದು ; ತಾರ್ಕಿಕ ಅಂತ್ಯವಿಲ್ಲದ್ದು. ಸಾರ್ವಜನಿಕರೇನು, ತಜ್ಞ ವಿಜ್ಞಾನಿಗಳಲ್ಲೂ ಈ ಬಗ್ಗೆ ಸ್ಪಷ್ಟತೆಯಿಲ್ಲ. ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು ‘ಧಾರಾ’ ಎಂಬ ಕುಲಾಂತರಿ ಸಾಸಿವೆ ತಳಿಯ ಕೃಷಿಗೆ ಸರ್ವೊಚ್ಛ ನ್ಯಾಯಾಲಯ ಇಬ್ಬಗೆಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ. ಧಾರಾದ ಧ್ಯೇಯ ಸಾಸಿವೆ ಉತ್ತರ ಭಾರತದ ಸಾಂಪ್ರದಾಯಿಕ ಬೆಳೆ. ರಾಜಸ್ಥಾನ, ಪಂಜಾಬ್, ಹರಿಯಾಣಾ, ಮಧ್ಯ ಪ್ರದೇಶ ಗಳ ಲ್ಲಿ ಹತ್ತಿರತ್ತಿರ 100 ಲಕ್ಷ ಹೆಕ್ಟೇರ್ ಜಾಗದಲ್ಲಿ ಸಾಸಿವೆ ಬೆಳೆಯಲಾಗುತ್ತದೆ. ಅಲ್ಲಿಯ ಅಡುಗೆ ಊಟದಲ್ಲಿ ಸಾಸಿವೆ ಎಣ್ಣೆಯ ಬಳಕೆ ಹೆಚ್ಚು. ಆದರೇನು ನಮ್ಮ ದೇಶ ಖಾದ್ಯ ತೈಲ ಉತ್ಪಾದನೆಯಲ್ಲಿ ಬಹಳ ಹಿಂದೆ. ಬಳಕೆಯ ಅರ್ಧದಷ್ಟೂ ನಮ್ಮ ಉತ್ಪಾದನೆಯಿಲ್ಲ; 60% ಖಾದ್ಯ ತೈಲ ವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ . ಹೀಗೆ ಆಮದು ಮಾಡಿಕೊಂಡು ಸೇವಿಸುತ್ತಿರುವ ಸೋಯಾ ಎಣ್ಣೆ, ಕೆನೋಲಾ ಎಣ್ಣೆಗಳು ಕುಲಾಂತರಿ ತಳಿಗಳಿಂದ ಉತ್ಪಾ ದಿಸಿದ್ದು ಎನ್ನುವುದು ಬಾಯಿ ಬಿಟ್ಟು ಹೇಳದಿದ್ದರೂ ಸತ್ಯ. ಜಾಗತಿಕವಾಗಿ ಸಾಸಿವೆಯ ಸರಾಸರಿ ಉತ್ಪಾದಕತೆ ಹೆಕ್ಟೇರಿಗೆ 2 ಟನ್ . ಆದರೆ ನಮ್ಮದು 1.2 ಟನ್. ನಮ್ಮಲ್ಲಿ ಹೆಚ್ಚು ಇಳುವರಿಯ ಉತ್ಕೃಷ್...