Posts

Showing posts from October, 2023

ಅಂಗಾಂಶ ಕೃಷಿ

Image
  ದಶಕದಿಂದ ಈಚೆಗೆ ತೋಟಗಾರರ ಗಮನ ಸೆಳೆದಿದ್ದು ‘ ಟಿಶ್ಯು ಕಲ್ಚರ್’ ಅಥವಾ ‘ ಅಂಗಾಂಶ ಕೃಷಿ’ಯಿಂದ ಪಡೆದಂತ ‘ ಪ್ಲಾಂಟಿಂಗ್ ಮಟೀರಿಯಲ್’ . ವಿಶೇಷವಾಗಿ ಬಾಳೆ ಬೆಳೆಗಾರರು ಅಂಗಾಂಶ ಕೃಷಿಯ ಸಸಿಗೆ ಹೆಚ್ಚಿನ ಆದ್ಯತೆ ಕೊಡುವುದನ್ನು ಗಮನಿಸಬಹುದು . ಇದರಿಂದಾಗುವ ಪ್ರಯೋಜನಗಳನ್ನು ಹಲವಾರು ತೋಟಗಾರರು ಅರಿತಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ . ನಿಜಕ್ಕೂ ಅಂಗಾಂಶ ಕೃಷಿ ಎಂದರೇನು , ಈ ವಿಧಾನದಲ್ಲಿ ಸಸಿಗಳನ್ನು ಪಡೆಯುವ ಪ್ರಕ್ರಿಯೆ , ತೋಟಗಾರಿಕಾ ಬೆಳೆಗಳಲ್ಲಿ ಇದರ ಅವಶ್ಯಕತೆ , ರೈತರಿಗಾಗುವ ಉಪಯೋಗಗಳ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶ. ವೈಜ್ಞಾನಿಕ ಹಿನ್ನೆಲೆ ಸಸ್ಯದ ಜೀವಕೋಶಗಳಿಗೆ ಬೇಕಾದ ರೂಪ ತಾಳುವ , ಪುನರ್ಜನನದ ಸಾಮರ್ಥ್ಯವಿದೆ ( ಆಂಗ್ಲ : ಟೋಟಿಪೊಟೆನ್ಸಿ ); ನಿಯಂತ್ರಿತ ವಾತಾವರಣದಲ್ಲಿ ಸಣ್ಣ ಅಂಗಾಂಶದಿಂದ ಇಡೀ ಸಸ್ಯವನ್ನೇ ರೂಪಿಸಲು ಸಾಧ್ಯವಿದೆ ಎಂಬ ವೈಜ್ಞಾನಿಕ ಹಿನ್ನಲೆ ವಿವರಿಸಿದ್ದು ಜರ್ಮನ್ ವಿಜ್ಞಾನಿ ' ಹ್ಯಾಬರ್ಲಂಡ್ ' (1905). 20 ನೇ ಶತಮಾನದ ಮಧ್ಯ ಭಾಗದ ವರೆಗೂ ಈ ವಿಧಾನ ಕೇವಲ ಸಂಶೋಧನೆಗಷ್ಟೇ ಮೀಸಲಿತ್ತು . ಕೃಷಿಯಲ್ಲಿ ಪ್ರಗತಿಯಾಗುತ್ತಿದ್ದಂತೆ ನರ್ಸರಿಗಳು ಶುರುವಾದವು. ಆದರೆ ಸಾಂಪ್ರದಾಯಿಕ ವಿಧಾನಗಳಿಂದ ಸಸ್ಯಾಭಿವೃದ್ಧಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಮಟ್ಟದಲ್ಲಿ ಸಸಿಗಳನ್ನು ಪೂರ...