ನೀರ ತಾರೆಯರು
ಇನ್ನೂ ಬೇರೂರದ ಆಗಷ್ಟೇ ಮೊಳಕೆಯೊಡೆದ ಬೀಜ ನಮ್ಮಂತೆ ಎಲುಬು-ಕೀಲುಗಳಿಲ್ಲದಿದ್ದರೂ ಎರಡೆಲೆ ತಳೆದು ಧೃಡವಾಗಿ ನೆಲದಿಂದ ಮೇಲೇಳಬಲ್ಲದು. ಇದು ಹೇಗೆ ಸಾಧ್ಯವೆಂದು ಎಂದಾದರೂ ಯೋಚಿಸಿದ್ದೀರಾ?. ಎಲ್ಲಾ ನೀರಿನ ಲೀಲೆ!. ಜೀವಕೋಶದ ಗೋಡೆಗಳ ಮೇಲೆ ಒತ್ತಡ ಹೇರುವ (ಇದಕ್ಕೆ turgor pressure ಎನ್ನಲಾಗುತ್ತೆ) ನೀರೆಂಬ ಜೀವರಸವೇ ಈ ಧೃಡತ್ವಕ್ಕೆ ಕಾರಣ. ಸಸ್ಯಗಳ ದೇಹ 95% ನೀರಿನಿಂದಲೇ ಮಾಡಲ್ಪಟ್ಟಿದ್ದೂ ಹಲವಾರು ರಾಸಾಯನಿಕ ಕ್ರಿಯೆಗಳಿಗೆ ನೀರು ಮಾಧ್ಯಮವಾಗಿದೆ. ದ್ಯುತಿ ಸಂಶ್ಲೇಷಣೆಯೆಂಬ ಯಜ್ಞಕ್ಕೆ ಆಹುತಿ ನೀರು ಎಂದರೆ ಆಶ್ಚರ್ಯವೆನಿಸಬಹುದು. ಆಮ್ಲಜನಕ, ಜಲಜನಕ ಎಂಬ ಎರಡು ಪೋಷಕಾಂಶಗಳು ಸಿಗುವುದೇ ನೀರಿನಿಂದ. ವಿಜ್ಞಾನ ಏನೇ ಹೇಳಲಿ ಸಸ್ಯಗಳಿಗಿರುವ ನೀರಿನ ಅವಶ್ಯಕತೆಯ ಸಾಮಾನ್ಯ ಜ್ಞಾನ ನಮಗೆಲ್ಲಾ ಇದ್ದೇ ಇದೆ. ಹಾಗಾಗಿ ಯಾವ ಕೆಲಸ ತಪ್ಪಿಸಿದರೂ ಗಿಡಗಳಿಗೆ ನೀರೆರೆಯುವ ಕೆಲಸ ತಪ್ಪಿಸುವುದಿಲ್ಲ. ಆದರೆ ಹಲವಾರು ಬಾರಿ ನೀರುಣಿಸುವ ಈ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ; ಕೆಲವೊಮ್ಮೆ ಮರೆತು ಬಿಡುತ್ತೇವೆ; ಕೆಲವೊಮ್ಮೆ ಸಮಯ ಹೊಂದುವುದಿಲ್ಲ; ವಿಶೇಷವಾಗಿ ನಗರದಲ್ಲಿ ವಲಸಿಗರಾಗಿದ್ದಲ್ಲಿ, ಹಬ್ಬ-ವಾರಾಂತ್ಯಗಳಲ್ಲಿ ಊರಿಗೆ ಹೊರಟು ನಿಂತರೆ ಗಿಡಗಳ ಪರಿಸ್ಥಿತಿ ಏನೆಂಬ ಚಿಂತೆ ಕಾಡುತ್ತದೆ. ಸಸ್ಯಗಳು ನೀರಲ್ಲೇ ಬೆಳೆಯುವಂತಿದ್ದರೇ ಈ ಸಮಸ್ಯೆಗೆ ಪರಿಹಾರ ಸಿಕ್ಕಬಹುದಲ್ಲಾ!. ಹಾಗಾಗಿ ಮಹತ್ವ ಹೊಂದಿದ್ದು ಜಲಸಸ್ಯಗಳು ಮತ್ತು ನೀರಲ್ಲಿ ಬೆಳೆಯಬಲ...