ಜೇನ್ ಕಹಾನಿ_ಪ್ರಜಾವಾಣಿ ಭಾನುವಾರ ಪುರವಣಿ
https://www.prajavani.net/agriculture/technology-in-agriculture/honey-bee-in-karnataka-varieties-and-stories-of-bees-944456.html ಬೆಳ್ಳಂಬೆಳಗೆ; ಸದ್ದು ಗದ್ದಲವಿಲ್ಲದೆ ಬಣ್ಣದ ಅಂಗಿ ತೊಟ್ಟು ಅಕ್ಕರೆಯ ಅತಿಥಿಗಳ ಆಗಮನಕ್ಕೆ ಅರಳಿ ನಿಂತ ಹೂಗಳು; ಹೆಚ್ಚು ಕಾಯಿಸದೆ ‘ಗುಂಯ್ಯ್’ ಗುಡುತ್ತಾ ಮೌನ ಮುರಿದು ಹೂಗಳನ್ನು ಮುತ್ತುವ ದುಂಬಿಗಳು. ಮನುಷ್ಯ ಪ್ರಾಣಿ ಏಳುವ ಮುನ್ನವೇ ಕಾರ‍್ಯಪ್ರವೃತ್ತರಾಗಿ ಹೂವಿಂದ ಹೂವಿಗೆ ಹಾರುತ್ತಾ ಹಿಂಗಾಲಿನ ಪುಟ್ಟ ಪರಾಗ ಚೀಲದಲ್ಲಿ ಪುಷ್ಪಧೂಳಿ ಸಂಗ್ರಹಿಸಿ ಮಕರಂದ ಹೀರುತ್ತಾ ಸಂಜೆಯವರೆಗೂ ಪುಷ್ಪಬೇಟೆ ನಡೆಸಿ ಮನೆಗೆ ವಾಪಸ್ಸ್! ಹೀಗೆ ಸಂಗ್ರಹಿಸಿ ತಂದ ಪರಾಗ, ಮಕರಂದವನ್ನು ಸಂಸ್ಕರಿಸಿ, ಗೂಡಿನ ಕೋಶಗಳಲ್ಲಿ ಇಳಿಸಿ, ಕೋಶದ್ವಾರವನ್ನು ಮುಚ್ಚುವ ಗಡಿಬಿಡಿ. ರಾಣಿ-ಮರಿಗಳ ಆರೈಕೆ, ಗೂಡಿನ ಸ್ವಚ್ಛತೆ, ಹಗಲು-ರಾತ್ರಿ ಕಾವಲು, ಮುಂತಾದ ಎಲ್ಲಾ ಕೆಲಸಗಳನ್ನು ತಮ್ಮಲ್ಲೇ ಹಂಚಿಕೊಂಡು ಕಸರತ್ತಿನ ಸಮರಸದ ಜೀವನ ನಡೆಸುವ ಜೇನು ನೊಣಗಳ ಜಗತ್ತು ವಿಸ್ಮಯ. ಜೇನು ನೊಣಗಳ ಜಾಡು ಹಿಡಿದು 30 ಮಿಲಿಯನ್ ವರ್ಷಗಳಿಂದ ಜೀವಿಸುತ್ತಿರುವ, ಡೈನೋಸಾರ್ ಗಳಿಗಿಂತ ಹಳೆಯದಾದ ಈ ಪುಟ್ಟ ಜೀವಿಗಳು 2.5ಮಿಲಿಯನ್ ವರ್ಷಗ...