ಮೀಮ್ ಕಥೆ
ಬೆಳಗೆದ್ದು ಗರಿ ಗರಿ ದಿನಪತ್ರಿಕೆ ಹಿಡಿದು ಪ್ರಚಲಿತ ವಿದ್ಯಮಾನಗಳನ್ನು ಓದುವ ಕಾಲವೊಂದಿತ್ತು . ಈಗ ದಿನಪತ್ರಿಕೆಗಳ ಸ್ಥಾನವನ್ನು ಸ್ಮಾರ್ಟ್ ಫೋನ್ ಗಳು ಆಕ್ರಮಿಸಿವೆ . ತಾಸಿಗೊಮ್ಮೆ ಹೊಸ ಸುದ್ದಿಗಳನ್ನು ‘ ರಿಫ್ರೆಶ್ ’ ಮಾಡುವುದು ಒಂದು ರೀತಿಯ ಗೀಳಾಗಿಬಿಟ್ಟಿದೆ . ಹೀಗೇ ಮೊಬೈಲ್ ಪರದೆಯನ್ನು ಸ್ಕ್ರೋಲ್ ಮಾಡುತ್ತಿರುವಾಗ ನಮ್ಮ ಗಮನ ಸೆಳೆಯುವುದು ಸುದ್ದಿಗಳ ಮಧ್ಯೆ ಇಣುಕುವ , ವಿನೋದಮಯ ಕ್ಯಾರೆಕ್ಟರ್ ಪಂಚಿಂಗ್ ಸಾಲು ಗಳ ಒಡನೆ ಮೂಡುವ ‘ ಮೀಮ್ ‘ ಗಳು (meme). ಪ್ರಚಲಿತ ಸುದ್ದಿಗಳು ಬಿತ್ತರವಾಗುವ ಮುನ್ನವೇ ಅವುಗಳನ್ನು ಗೇಲಿ ಮಾಡಿ ವೈರಲ್ ಆಗುವ ಈ ‘ ಮೀಮ್ ’ ಗಳು ಸಾಂಸ್ಕೃತಿಕ , ಸಾಮಾಜಿಕ , ರಾಜಕೀಯ ವಿಷಯಗಳನ್ನು ಹಾಸ್ಯಮಯವಾಗಿ , ವಿಡಂಬನಾತ್ಮಕವಾಗಿ ವ್ಯಕ್ತಪಡಿಸುವ ಅಂರ ್ಜಾಲ ಸಂಸ್ಕೃತಿಯಾಗಿಬಿಟ್ಟಿವೆ . ಕ್ಷಣ ಹೊತ್ತಿನಲ್ಲಿ ಕೋಟ್ಯಾಂತರ ಡಿಜಿಟಲ್ ಪ್ರೇಕ್ಷಕರನ್ನು ತಲುಪಿ ‘ ವೈರಲ್ ’ ಆಗುವ ‘ ಮೀಮ್ ’ ಗಳ ಅಸಲಿ ಕಥೆ ಕುತೂಹಲಕಾರಿಯಾಗಿದ್ದು . ನೆಟ್ಟಿಗ...