Posts

Showing posts from April, 2022

ಕೊಕೆಡಾಮಾ-ಪಾಚಿ ಚೆಂಡಿನ ಪ್ರಪಂಚ!

Image
ಕಾಂಕ್ರೀಟ್ ಜಗತ್ತಿನ ಯಾಂತ್ರೀಕೃತ ಬದುಕು ; ಆಗೊಮ್ಮೆ ಈಗೊಮ್ಮೆ ವಾರಾಂತ್ಯದ ಮೋಜು ; ಅಲ್ಲಲ್ಲಿ , ಕೋಣೆಯ ಮೂಲೆಯಲ್ಲಿ , ಏಣಿ ಮೆಟ್ಟಿಲುಗಳಲ್ಲಿ , ಕಿಟಕಿ ಚೌಕಟ್ಟಿನಲ್ಲಿ , ಓದು ಮೇಜಿನ ಮೇಲೆ , ರಸ್ತೆ ಬದಿಯ ಕಂಪೌಂಡ್ ಗೋಡೆಯ ಮೇಲೆ , ಮನೆ ಛಾವಣಿಯಿಂದ ತೂಗುತ್ತಾ ಈ ಕೃತಕ ಜೀವನಕ್ಕೆ ಚೈತನ್ಯ ತುಂಬುವ ಹೂಕುಂಡಗಳು , ಪುಟ್ಟ ಗಿಡಗಳು ; ಇತಿ ನಗರವಾಸೀನಾಂ ಲಕ್ಷಣಮ್ !. ಯಾವುದೋ ಕಾರಣಕ್ಕೆ ನಿಸರ್ಗದಿಂದ ದೂರವಾಗಿದ್ದಕ್ಕೆ ಈಗ ಗಿಡ ಮರಗಳಿಂದ ಸುತ್ತುವರೆದು ತಾಜಾ ಹವಾ ಸೇವಿಸುವ ತುಡಿತ ಶಹರದ ಮಂದಿಯದು . ಕೆಲಸದ ಒತ್ತಡ ಮರೆಸಿ , ಖಿನ್ನತೆ ದೂರಗೊಳಿಸಿ , ಸೃಜನಶೀಲತೆ ಉತ್ತಮಗೊಳಿಸಿ , ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಿ , ದೇಹ - ಮನಸ್ಸಿನ ಸ್ವಾಸ್ಥ್ಯ ಕಾಪಾಡುವ ಸಸ್ಯ ಪ್ರಪಂಚವನ್ನು ಒಳಾಂಗಣಕ್ಕೆ ಕರೆಸುತ್ತಿರುವುದು ನಗರವಾಸಿಗಳ ಇತ್ತೀಚಿನ ಟ್ರೆಂಡ್ . ಅದರಲ್ಲೂ ಕೊರೋನಾ ಕಾಲದಲ್ಲಿ ಹೆಚ್ಚಿನ ಮಹತ್ವ ಪಡೆದ ಈ ಒಳಾಂಗಣ ತೋಟ , ತಾರಸಿ ತೋಟದ ಪರಿಕಲ್ಪನೆಗಳು ಇಂದಿಗೂ ಬಹುತೇಕರ ನೆಚ್ಚಿನ ಹವ್ಯಾಸವಾಗಿದೆ . ಗಾಳಿ ಶುದ್ಧೀಕರಿಸುವ , ನೆರಳಿಗೆ ಒಗ್ಗಿಕೊಳ್ಳುವ , ಕಮ್ಮಿ ನೀರು ಬೇಡುವ , ಚಿಕ್ಕ ಜಾಗವನ್ನು ಚಂದಾಗಿ ಅಲಂಕರಿಸುವ ,   ಗಡುಸಾಗಿ ಬೆಳೆವ ಸಸ್ಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ . ಈ ಎಲ್ಲಾ ಮಾನದಂಡಗಳನ್ನು ಪೂರೈಸುವ ಕಳ್ಳಿ ಜಾತಿಯ ಗಿ...