Posts

Showing posts from July, 2018

ಪ್ರಯೋಗ ಶಾಲೆಯ ಇಲಿಗಳು

Image
An article about lab rats! ಪ್ರಯೋಗ ಶಾಲೆಯ ಇಲಿಗಳು ಮಾನವನ ಕುತೂಹಲತೆ ಎಲ್ಲೆ ಮೀರಿದ್ದು. ತನ್ನ ದೇಹದ ರಚನೆ ಮತ್ತು ಅದು ಕೈಗೊಳ್ಳುವ ಕಾರ್ಯದ ಬಗ್ಗೆಯೂ ಆತ ಅತ್ಯಂತ ಆಸಕ್ತ. ಹೀಗೆ ಕುತೂಹಲ ತಣಿಸಿಕೊಳ್ಳಲು, ಔಷಧಿ, ರಾಸಾಯನಿಕ, ಕೃತಕ ಪರಿಸರವೊಂದು ತನ್ನ ದೇಹದ ಮೇಲೆ ಮನದ ಮೇಲೆ ಬೀರುವ ಪರಿಣಾಮ ನೋಡಬೇಕೆಂದಾಗ ಸಹಜವಾಗಿ ತನ್ನಂತೆ ಇರುವ ಪ್ರಾಣಿಗಳೆಡೆಗೆ ತಿರುಗುತ್ತಾನೆ. ಆದರೆ ಇತ್ತೀಚೆಗೆ ಇಂತಹ ಪ್ರಯೋಗಗಳು ಪ್ರಾಣಿ ಸಂರಕ್ಷಣಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿವೆ. ವಿಜ್ಞಾನಿಗಳು ಪ್ರಾಣಿಗಳನ್ನು ಗೂಡಲ್ಲಿ ಕಟ್ಟಿ ಹಾಕಿ, ವಿಷ ಕೊಟ್ಟು, ರಾಸಾಯನಿಕಗಳನ್ನು ಚುಚ್ಚಿ, ದೇಹ ಕತ್ತರಿಸಿ ತಮ್ಮ ಪ್ರಯೋಗದ ಅನುಕೂಲಕ್ಕೆ ತಕ್ಕಂತೆ ನಿರ್ದಯಿಯಾಗಿ ವರ್ತಿಸುತ್ತಾರೆ ಎಂಬ ದೂರು “ಪೇಟಾ” ( PETA-People for Ethical Treatment of Animals ) ದಂತಹ ಸಂಸ್ಥೆಗಳದು. ಪ್ರಯೋಗಾಲಯದಲ್ಲಿ ಮಾನವನ ದೇಹ ರಚನೆ ಹೋಲುವ ಪ್ರಾಣಿಗಳ ಬಳಕೆ 16 ನೇ ಶತಮಾನದಿಂದಲೇ ಚಾಲ್ತಿಯಲ್ಲಿತ್ತು. ಹಣ್ಣು ನೊಣ, ಮೊಲ, ಹಲ್ಲಿ, ಕಪ್ಪೆ, 95% ಕ್ಕಿಂತ ಹೆಚ್ಚಿನ ಸಂದರ್ಭದಲ್ಲಿ ಇಲಿಗಳೇ ( mice and rats ) ‘ಬಲಿ ಕಾ ಬಕ್ರಾ’ಗಳು. ವಂಶವಾಹಿಗಳ ಅಧ್ಯಯನ, ಮನಃ ಶಾಸ್ತ್ರ ಅಧ್ಯಯನ, ವೈದ್ಯಕೀಯ ವಿಜ್ಞಾನದಲ್ಲಿ ಮುಖ್ಯವಾಗಿ ಕ್ಯಾನ್ಸರ್ ಸಂಶೋಧನೆಯಲ್ಲಿ ಇಲಿಗಳನ್ನು ಬಳಸಲಾಗುತ್ತದೆ. ಪ್ರಯೋಗ ಶಾಲೆಗಳಲ್ಲಿ ಪ್ರಾಣಿಗಳ ಬಳಕೆಗೆ ಪ್ರತಿ ದೇಶದಲ್ಲೂ ನಿರ್ಬಂಧನೆ...