Posts

ಫಿಟ್ಟೋನಿಯಾ ವರ್ಣ ವೈವಿಧ್ಯ

Image
  ಮನುಷ್ಯನ   ಅಂಗಾಂಗಕ್ಕೂ   ಸಸ್ಯಗಳ   ಹೂವು   ಕಾಯಿಗೂ   ಏನೋ   ಹೇಳಿತೀರದ   ಸಂಬಂಧ .  ಮೆದುಳಿನಂತ   ಅಕ್ರೂಟ್ ,  ಕಿಡ್ನಿಯಂತ   ಅವರೆ ,  ಲೇಡಿಸ್   ಫಿಂಗರ್   ನಂತ   ಬೆಂಡೆ ,  ಕಮಲದಂತ   ನಯನ ,  ತೊಂಡೆಯಂತ   ತುಟಿ ,  ದಾಳಿಂಬೆಯಂತ   ಹಲ್ಲು ,  ಬ್ಲೀಡಿಂಗ್   ಹಾರ್ಟ್   ಬಳ್ಳಿ ,  ಹೀಗೆ   ಈ   ಪಟ್ಟಿ   ಅಂತ್ಯವಿಲ್ಲದೇ   ಸಾಗಬಲ್ಲದು .  ಇದಕ್ಕೊಂದು   ಸೇರ್ಪಡೆ   ನರನಾಡಿಗಳ   ವ್ಯೂಹವನ್ನು ಹೋಲುವ ಎಲೆಗಳುಳ್ಳ ‘ ನರ್ವ್ ಪ್ಲಾಂಟ್ ’   ಅಥವಾ ‘ ಫಿಟ್ಟೋನಿಯಾ ’ . ಘಾಡ ಹಸಿರು ಎಲೆಗಳ ಮೇಲೆ ಬೆಳ್ಳಿ ನರಗಳು; ಕಡು ಹಸಿರು ಎಲೆಗಳ ಮೇಲೆ ಕೆಂಪು ನರಗಳು; ತಿಳಿ ಗುಲಾಬಿ ಎಲೆಗಳ ಮೇಲೆ ಹಸಿರು ನರಗಳು; ನಿಯಾನ್ ಪಿಂಕ್, ಲೈಮ್ ಗ್ರೀನ್, ಫ್ಲೇಮ್ ಆರೆಂಜ್; ಹೀಗೆ ಕಾಂಟ್ರಾಸ್ಟಿಂಗ್ ಬಣ್ಣಗಳ ವೈವಿಧ್ಯಮಯ ವಿನ್ಯಾಸದ ಎಲೆ-ನರಗಳನ್ನು ಹೊಂದಿರುವ ಫಿಟ್ಟೋನಿಯಾ ಒಂದು ಹೆಸರಾಂತ ಒಳಾಂಗಣ ಸಸ್ಯ. ತವರೂರು ದಕ್ಷಿಣ ಅಮೇರಿಕಾದ ಪೆರು ಪ್ರದೇಶದ ಮಳೆಕಾಡು. ಅಲ್ಲಿನ ನಾಟಿ ಔಷಧಿಯಲ್ಲಿ ತಲೆ ನೋವಿನ ಶಮನಕ್ಕೆ ಪೀಟ್ಟೋನಿಯಾದ ಎಲೆಗಳು ಬಳಕೆಯಲ್ಲಿದ್ದವಂತೆ. 1867ರಲ್ಲಿ ಎಲಿಜಬೆತ್ ಮತ್ತು ಸಾರಾ ಫಿಟ್ಟಾನ್ ಎಂಬ ಸಹೋದರಿಯರು ತಮ್ಮ ಪುಸ...

ಸಸ್ಯ ಪೋಷಕಾಂಶಗಳು, ರೂಪ-ಹೀರಿಕೆ-ಬಳಕೆ

Image
ಸೂರ್ಯನ ಬೆಳಕು, ಮಣ್ಣು ಮತ್ತು ಇವುಗಳನ್ನು ಆಧರಿಸಿ ಬೆಳೆದ ಸಸ್ಯ – ಇಂತದ್ದೊಂದು ಸಂಕೀರ್ಣ ವ್ಯವಸ್ಥೆ ನಮ್ಮ ಹೊಟ್ಟೆ-ಬಟ್ಟೆಯ ಮೂಲವೆಂದರೆ ಉತ್ಪ್ರೇಕ್ಷೆಯಲ್ಲ. ಇವುಗಳಲ್ಲಿ ಸೂರ್ಯನ ಬೆಳಕನ್ನಂತೂ ಮುಟ್ಟುವಂತಿಲ್ಲ ಬಿಡಿ. ಇನ್ನು ಮಣ್ಣನ್ನು ತಿದ್ದಿ ತೀಡುವ ಸುಮಾರು ಹಾದಿಯನ್ನು ನಾವು ಕಂಡುಕೊಂಡಿದ್ದೇವೆ. ಇದೇ ಹಿನ್ನೆಲೆಯಲ್ಲಿ ರಾಸಾಯನಿಕವೇ ಇರಲಿ, ಜೈವಿಕ/ಸಾವಯವವೇ ಇರಲಿ, ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ, ಪೂರೈಕೆಯೂ ಇದೆ. ಎಡುವುತ್ತಿರುವುದು ಬಹುಶಃ ಅವುಗಳ ಸಮರ್ಪಕ ಬಳಕೆಯಲ್ಲಿ. ಈ ನಿಟ್ಟಿನಲ್ಲಿ ಮಣ್ಣು-ಸಸ್ಯ ವ್ಯವಸ್ಥೆಯ ತಿಳುವಳಿಕೆ ಅಗತ್ಯ. ಪೋಷಕ ಅಂಶ: ಬೆಳೆಗಳ ಆರೋಗ್ಯದ ದೃಷ್ಟಿಯಿಂದ ನಾವು ಹೊರಗಿನಿಂದ ನೀಡುವ ಗೊಬ್ಬರವನ್ನೇ ಅಥವಾ ಆಡುಭಾಷೆಯಲ್ಲಿ ಆಹಾರವನ್ನೇ ಪೋಷಕಾಂಶಗಳೆಂದು ಕರೆಯಬಹುದು. ಈ ಪೋಷಕಾಂಶಗಳೇ ಬೆಳೆಗಳ ದೇಹ ಸೇರಿ ಜೀವರಾಶಿಯಾಗಿ ಪರಿವರ್ತನೆಯಾಗುತ್ತದೆ. ನಮ್ಮ ಪೋಷಣೆ ಹೆಚ್ಚಿದ್ದಷ್ಟು ಬೆಳೆಗಳು ಸದೃಢವಾಗಿ ಬೆಳೆಯುತ್ತವೆ, ಇಳುವರಿ ಹೆಚ್ಚುತ್ತದೆ, ನಮ್ಮ ಹೊಟ್ಟೆ ಸೇರುವ ಆಹಾರವೂ ಪೌಷ್ಟಿಕವಾಗಿರುತ್ತದೆ. ಆಯಾ ಹವಾಗುಣವನ್ನು ಆಧರಿಸಿ ಸಸ್ಯದ ಸಂಪೂರ್ಣ ಜೀವನಕ್ಕೆ ಬೇಕಾಗುವಷ್ಟು ಪೋಷಕಾಂಶಗಳನ್ನು ಮಣ್ಣು ಹೊಂದಿರುತ್ತದೆ. ಹೊರಗಿನಿಂದ ಗೊಬ್ಬರ ಕೊಡದೆಯೇ ಸಸ್ಯಗಳ ಬೆಳೆಯಬಲ್ಲವು. ಆದಾಗ್ಯೂ ಪದೇ ಪದೇ ಒಂದೇ ಜಾಗದಲ್ಲಿ ಬೆಳೆ ಬೆಳೆದಾಗ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಸಾಕಷ್ಟು ನೀರು ಬ...

ನೀಲಿ ಎಂಬ ನಿಗೂಢದ ಹಿಂದೆ

Image
              ಕಲರ್ ಕಲರ್ ವಾಟ್ ಕಲರ್ ಡು ಯು ವಿಶ್? ನಾವೆಲ್ಲ ಚಿಕ್ಕವರಿದ್ದಾಗ ಆಡ್ತಾ ಇದ್ದ ಆಟ ಇದು. 'ಔಟ್' ಆದ ಒಬ್ಬ ಆಟಗಾರನಿಗೆ ಎಲ್ಲರೂ ಕೂಗಿ ಈ ಪ್ರಶ್ನೆ ಕೇಳೋದು, ಆತ ತನಗನ್ನಿಸಿದ ಬಣ್ಣ ಆಯ್ಕೆ ಮಾಡೋದು, ಬಾಕಿ ಆಟಗಾರರೆಲ್ಲ ಪಟ್ಟನೆ ಓಡಿ ಅದೇ ಬಣ್ಣದ ಯಾವುದಾದರೊಂದು ವಸ್ತುವನ್ನು ಮುಟ್ಟಿ ನಿಲ್ಲೋದು. ಬಣ್ಣದ ಹೆಸರು ಕೇಳಿದ್ದೇ ನಾನು ಓಡುತ್ತಿದ್ದದ್ದು ಅಮ್ಮನ ಹೂದೋಟಕ್ಕೆ; ಹಸಿರು, ಕೆಂಪು, ಹಳದಿ, ಕೇಸರಿ, ಗುಲಾಬಿ, ಬಿಳಿ ಹೀಗೆ ಬಹುತೇಕ ಬಣ್ಣಗಳು ಅಲ್ಲಿ ಸುಲಭವಾಗಿ ಸಿಕ್ಕಿ ಬಿಡುತ್ತಿದ್ದವು. ನೀಲಿ, ನೇರಳೆಯ ಸವಾಲು ಬಂದಾಗ ಈ ಪ್ಲಾನ್ ಫ್ಲಾಪ್! ಈಗ ನಿಮ್ಮನ್ನೇ ಕೇಳಿಕೊಳ್ಳಿ; ನೀಲಿ ಬಣ್ಣದ ಹೂಗಳನ್ನು ಪಟ್ಟಿ ಮಾಡಿ ಎಂದರೆ ಶಂಖಪುಷ್ಪ, ಕುರಂಜಿ, ಹೈಡ್ರಾಂಜಿಯಾ, ಪ್ಯಾನ್ಸಿ, ಪೆಟುನಿಯಾ, ಎನ್ನುತ್ತಾ ಗರಿಷ್ಟ ಎಷ್ಟು ಸಸ್ಯಗಳನ್ನು ಹೆಸರಿಸಬಲ್ಲಿರಿ? ಹತ್ತು? ಹದಿನೈದು? ಕಷ್ಟ ಅಲ್ಲವೇ! ಅದೇ ಕೆಂಪು ಬಣ್ಣವಾದರೆ? ಮುಖ ಮೇಲೆತ್ತಿ ನೋಡಿದರೆ ಆಕಾಶ ನೀಲಿ, ಕಂಡಷ್ಟೂ ಮುಗಿಯದ ಸಮುದ್ರ ನೀಲಿ, ರಾತ್ರಿ ಮಿನುಗುವ ನಕ್ಷತ್ರ ನೀಲಿ ಹೀಗೆ ಪರಿಸರದಲ್ಲಿ ನೀಲಿ ಸಾಮಾನ್ಯವೆನೋ ಅನ್ನಿಸಬಹುದು. ಆದರೆ ಸಸ್ಯ-ಪ್ರಾಣಿ ಸಂಕುಲ, ಜೈವಿಕ ವಸ್ತುಗಳನ್ನು ಗಮನಿಸಿದರೆ ನೀಲಿ ದುರ್ಲಭವೇ. ಬೆರಳೆಣಿಕೆಯಷ್ಟು ಪ್ರಾಣಿಗಳಲ್ಲಿ, ಹತ್ತರಲ್ಲೊಂದು ಸಸ್ಯದಲ್ಲಿ ನೀಲಿ ಬಣ್ಣ ಕಾಣಸಿಗಬಹುದು. ನಮ್ಮೆಲ್ಲರ 'ಫೆವರೆಟ್' ...

ಸಸ್ಯ ತಳಿ ವಿಜ್ಞಾನ

Image
  ಮಾನವನ ವಿಕಸನದ ಹಾದಿಯಲ್ಲಿ ವಿಶೇಷವಾದ ಮೈಲಿಗಲ್ಲು ಕೃಷಿ ಚಟುವಟಿಕೆಯ ಆರಂಭ . ಒಂದಾನೊಂದು ಕಾಲದಲ್ಲಿ ಎರಡೇ ಎರಡು ಜೊಳ್ಳು ಕಾಳಿನ ಗುಚ್ಚ ಹೊಂದಿದ್ದ ಭತ್ತವೆಂಬ ‘ ಹುಲ್ಲು ’ ಸಸ್ಯ ಇಂದು ತೆನೆತೆನೆ ತೂಗುವ , ವಿಶ್ವಕ್ಕೇ ಆಹಾರ ಒದಗಿಸುವ ಬೆಳೆಯಾಗಿ ಪರಿವರ್ತನೆಯಾದ ಪವಾಡದ ಹಿಂದೆ ಕೃಷಿಯ ಕೊಡುಗೆಯಿದೆ . ಕಾಡಿನ ಪ್ರಾಣಿ - ಸಸ್ಯಗಳು ಜಾನುವಾರು - ಆಹಾರ ಬೆಳೆಯಾಗಿ ಇಂದು ಭೋಗಿಸಲು ಯೋಗ್ಯವಾಗಿದ್ದು ಶತಶತಮಾನಗಳಿಂದ ಮಾನವ ನಡೆಸಿದ , ಹೆಚ್ಚು ಇಳುವರಿ ನೀಡುವ ತಳಿಯೊಂದರ ನಿರಂತರ ಆಯ್ಕೆ , ಸಂಶೋಧನೆಯೇ ಕಾರಣ . ಇಂದೂ ಕೂಡಾ ಬಹುಪಾಲು ಕೃಷಿ ವಿಜ್ಞಾನಿಗಳು ತಮ್ಮ ಜೀವನ ಸವೆಸುವುದು ಇದೇ ಮಾದರಿಯ , ಇನ್ನಷ್ಟು ವೈಜ್ಞಾನಿಕವಾದ ಉನ್ನತ ತಳಿಗಳ ಸಂಶೋಧನೆಗೆ . ಜಾಗತಿಕ ಆಹಾರ ವ್ಯವಸ್ಥೆಯ ಸಮಸ್ಯೆಗಳನ್ನು ಎದುರಿಸುವಲ್ಲಿ ಸುಧಾರಿತ ತಳಿಗಳ ಆವಿಷ್ಕಾರ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳುವ ಸಮಯವಿದು . ಇದೇ ಹಿನ್ನೆಲೆಯಲ್ಲಿ ತಳಿ ವಿಜ್ಞಾನದ ಪರಿಚಯ , ತಳಿ ಎಂದರೇನು , ತಳಿ ಅಭಿವೃದ್ಧಿ ಪಡಿಸುವ ವಿಧಾನ , ತಗಲುವ ಪರಿಶ್ರಮ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶ . ತಳಿ ವಿಜ್ಞಾನ ಜಾನುವಾರುಗಳಲ್ಲಿ ಬಳಕೆಯಲ್ಲಿರುವ ' ಬ್ರೀಡ್ ' ಅಥವಾ ' ತಳಿ ' ಎಂಬ ಶಬ್ಧ ಎಲ್ಲರಿಗೂ ಪರ...