Posts

A Community that breathes Agriculture

Image
                                        https://www.deccanherald.com/india/karnataka/a-community-that-breathes-agriculture-1211311.html Gokarna, known among tourists and pilgrims is a popular travelling destination for summer. Besides beaches and temples, very few are acquainted with its other facets, like the indigenous ‘Halakki Vokkaliga’ tribe and their expertise towards agriculture. Fragmented fields of just two-four cents don’t seem to make any difference, as they grow variety of crops which are rare to find elsewhere. The most sought after vegetables of coastal Uttara Kannada White sweet potatoes (bili genasu), parrot green twisted hot chillies (Gokarna mensu), slendor long purple, white and green streaked brinjals (gokarna badane), burgundy colored broad leaved amaranthus (kempu ottu harive), ash gourds & pumpkins double the size of our head, pear shaped bot...

ಮೈಕ್ರೋಗ್ರೀನ್ಸ್

Image
ಸಣ್ಣಗೆ ತುರಿದ ಗಜ್ಜರಿ ಅಥವಾ ಸೌತೆಕಾಯಿ, ಮೊಳಕೆ ಕಟ್ಟಿದ ಹೆಸರು ಕಾಳು, ಉಪ್ಪು-ಹುಳಿ-ಖಾರ; ‘ಕೋಸಂಬರಿ’ ಎಂದು ಕರೆಯಲ್ಪಡುವ ಈ ಹಸಿ ತರಕಾರಿ ಕಲಸುಮೇಲೋಗರಕ್ಕೆ ಇತ್ತೀಚಿನ ಸೇರ್ಪಡೆ ದಾಳಿಂಬೆ, ಜೋಳದ್ದು; ಬಿಟ್ಟರೆ ಶತಶತಮಾನದಿಂದ ನಮ್ಮ ‘ದೇಸೀ ರೆಸಿಪಿ'ಯಲ್ಲಿ ಹೆಚ್ಚೇನೂ ನವೀನತೆಯಿಲ್ಲ. ಫೈವ್ ಸ್ಟಾರ್ ಹೋಟೆಲ್ಲಿನ ‘ಸಲಾಡ್' ಎಂಬ ಇದರದ್ದೇ ಪ್ರತಿರೂಪ ದಿನವೂ ಹೊಸತನ ಪಡೆಯುತ್ತಿದೆ. ‘ಶೆಫ್'ಗಳ ಕೈಯಲ್ಲಿ ‘ತಿನ್ನುವುದಕ್ಕಿಂತ ನೋಡುವುದೇ ಚಂದ' ಎಂಬಷ್ಟು ಸೊಗಸಾಗಿ ಮೂಡುತ್ತಿದೆ. ನಾವು ತಿನ್ನುವ ಆಹಾರ ನಾಲಿಗೆಗೆ ರುಚಿಯೆನಿಸುವ ಮೊದಲು ಕಣ್ಣಿಗೆ-ಮೂಗಿಗೆ ಖುಷಿಯೆನಿಸಬೇಕು ಅಲ್ಲವೇ! ಅದೇ, ಸಲಾಡ್‌ನ ಪವಾಡ. ಹಾಗಾಗಿಯೇ ಆರೋಗ್ಯಕರವಾದ, ಊಟದ ತಟ್ಟೆಗೆ ರಂಗು ತುಂಬುವ, ಬೇಯಿಸಿದ ಪದಾರ್ಥಗಳ ನಡುವೆ ತಾಜಾತನ ಭರಿಸುವ ಕೋಸಂಬರಿ ಮಹತ್ವ ಪಡೆದಿದ್ದು. ಈಗಂತೂ ಸ್ಥಳೀಯ ತರಕಾರಿಗಳನ್ನು ಬದಿಗೊತ್ತಿ ಲೆಟ್ಯುಸ್, ಕೇಲ್, ಅರುಗುಲಾ, ಸೆಲೆರಿ, ಜು಼ಕಿನಿ, ಹೀಗೆ ಪರದೇಶೀ ಸೊಪ್ಪು ತರಕಾರಿಗಳು ಸಲಾಡ್ ನ ಭಾಗವಾಗಿವೆ. ಇವುಗಳ ಜೊತೆ ಗಮನ ಸೆಳೆಯುತ್ತಿರುವುದು ‘ಮೈಕ್ರೋಗ್ರೀನ್ಸ್'. 1980ರ ಸಮಯದಲ್ಲಿ ಅಮೇರಿಕಾದ ರೆಸ್ಟೊರೆಂಟ್ ಗಳಲ್ಲಿ ಐಷಾರಾಮಿ ಆಗಿ ಬಳಕೆಯಲ್ಲಿದ್ದ ಮೈಕ್ರೋಗ್ರೀನ್ಸ್ ಆರೋಗ್ಯವರ್ಧಕ ಮೌಲ್ಯಗಳಿಂದ ಮಧ್ಯಮ ವರ್ಗದಲ್ಲೂ ಹೆಚ್ಚು ಪ್ರಚಲಿತವಾಯಿತು. ವಿಶ್ವದೆಲ್ಲೆಡೆ ಹಬ್ಬಿ ಈಗ ನಮ್ಮ ನಡುವೆಯೂ ಕಾಲಿರಿಸಿದೆ. ಏನಿದು ಮೈಕ್ರೋಗ್ರ...

ನೀರ ತಾರೆಯರು

Image
  ಇನ್ನೂ ಬೇರೂರದ ಆಗಷ್ಟೇ ಮೊಳಕೆಯೊಡೆದ ಬೀಜ ನಮ್ಮಂತೆ ಎಲುಬು-ಕೀಲುಗಳಿಲ್ಲದಿದ್ದರೂ ಎರಡೆಲೆ ತಳೆದು ಧೃಡವಾಗಿ ನೆಲದಿಂದ ಮೇಲೇಳಬಲ್ಲದು. ಇದು ಹೇಗೆ ಸಾಧ್ಯವೆಂದು ಎಂದಾದರೂ ಯೋಚಿಸಿದ್ದೀರಾ?. ಎಲ್ಲಾ ನೀರಿನ ಲೀಲೆ!. ಜೀವಕೋಶದ ಗೋಡೆಗಳ ಮೇಲೆ ಒತ್ತಡ ಹೇರುವ (ಇದಕ್ಕೆ turgor pressure ಎನ್ನಲಾಗುತ್ತೆ) ನೀರೆಂಬ ಜೀವರಸವೇ ಈ ಧೃಡತ್ವಕ್ಕೆ ಕಾರಣ. ಸಸ್ಯಗಳ ದೇಹ 95% ನೀರಿನಿಂದಲೇ ಮಾಡಲ್ಪಟ್ಟಿದ್ದೂ ಹಲವಾರು ರಾಸಾಯನಿಕ ಕ್ರಿಯೆಗಳಿಗೆ ನೀರು ಮಾಧ್ಯಮವಾಗಿದೆ. ದ್ಯುತಿ ಸಂಶ್ಲೇಷಣೆಯೆಂಬ ಯಜ್ಞಕ್ಕೆ ಆಹುತಿ ನೀರು ಎಂದರೆ ಆಶ್ಚರ್ಯವೆನಿಸಬಹುದು. ಆಮ್ಲಜನಕ, ಜಲಜನಕ ಎಂಬ ಎರಡು ಪೋಷಕಾಂಶಗಳು ಸಿಗುವುದೇ ನೀರಿನಿಂದ. ವಿಜ್ಞಾನ ಏನೇ ಹೇಳಲಿ ಸಸ್ಯಗಳಿಗಿರುವ ನೀರಿನ ಅವಶ್ಯಕತೆಯ ಸಾಮಾನ್ಯ ಜ್ಞಾನ ನಮಗೆಲ್ಲಾ ಇದ್ದೇ ಇದೆ. ಹಾಗಾಗಿ ಯಾವ ಕೆಲಸ ತಪ್ಪಿಸಿದರೂ ಗಿಡಗಳಿಗೆ ನೀರೆರೆಯುವ ಕೆಲಸ ತಪ್ಪಿಸುವುದಿಲ್ಲ. ಆದರೆ ಹಲವಾರು ಬಾರಿ ನೀರುಣಿಸುವ ಈ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ; ಕೆಲವೊಮ್ಮೆ ಮರೆತು ಬಿಡುತ್ತೇವೆ; ಕೆಲವೊಮ್ಮೆ ಸಮಯ ಹೊಂದುವುದಿಲ್ಲ; ವಿಶೇಷವಾಗಿ ನಗರದಲ್ಲಿ ವಲಸಿಗರಾಗಿದ್ದಲ್ಲಿ, ಹಬ್ಬ-ವಾರಾಂತ್ಯಗಳಲ್ಲಿ ಊರಿಗೆ ಹೊರಟು ನಿಂತರೆ ಗಿಡಗಳ ಪರಿಸ್ಥಿತಿ ಏನೆಂಬ ಚಿಂತೆ ಕಾಡುತ್ತದೆ. ಸಸ್ಯಗಳು ನೀರಲ್ಲೇ ಬೆಳೆಯುವಂತಿದ್ದರೇ ಈ ಸಮಸ್ಯೆಗೆ ಪರಿಹಾರ ಸಿಕ್ಕಬಹುದಲ್ಲಾ!. ಹಾಗಾಗಿ ಮಹತ್ವ ಹೊಂದಿದ್ದು ಜಲಸಸ್ಯಗಳು ಮತ್ತು ನೀರಲ್ಲಿ ಬೆಳೆಯಬಲ...

ಪ್ರಿಸರ್ವಡ್ ಮೋಸ್

Image
ಮಣ್ಣು, ನೀರು, ಗಾಳಿ, ಬೆಳಕು, ಗಿಡ-ಮರದಂತಹ ಪ್ರಾಕೃತಿಕ ಅಂಶಗಳಿಂದ ಯಾವಾಗಲೂ ಸುತ್ತವರಿದಿರಬೇಕೆಂಬುದು ನಮ್ಮ ಬಯಕೆ. ಹಳ್ಳಿ ಜೀವನದಲ್ಲಿ ಇವೆಲ್ಲವೂ ಸಹಜಲಭ್ಯ. ಪಟ್ಟಣಗಳಲ್ಲಿ ವಿದ್ಯುತ್ ದೀಪ, ಹವಾನಿಯಂತ್ರತೆ, ನೀರಿನ ಕಾರಂಜಿ, ಮರದ ಪೀಠೋಪಕರಣಗಳು, ಹೀಗೆ ಕೃತಕವಾದರೂ ಸರಿ, ಒಂದಿಲ್ಲೊಂದು ರೀತಿಯಲ್ಲಿ ನಿಸರ್ಗದ ಅಂಶಗಳನ್ನು ಒಳಾಂಗಣದಲ್ಲಿ ಅಳವಡಿಸಿಕೊಳ್ಳುವುದನ್ನು ನಾವು ಕಲಿತಿದ್ದೇವೆ. ಪ್ರಾಕೃತಿಕವಾದುದ್ದೇ ಬೇಕೆಂಬ ಹಟ ಬಹುಶಃ ಒಳಾಂಗಣ ಸಸ್ಯಗಳ ಬಳಕೆಯನ್ನು ಮುಂಚೂಣಿಗೆ ತಂದಿರಬೇಕು. ಎಷ್ಟೇ ಇಷ್ಟವಾದರೂ ಒಳಾಂಗಣದಲ್ಲಿ ಸಸ್ಯಗಳನ್ನು ಸಲಹುವುದು ಎಲ್ಲಾ ಸಂದರ್ಭದಲ್ಲೂ ಕಷ್ಟ. ಹೂಕುಂಡಗಳನ್ನಿಡಲು ಜಾಗ, ನೀರು-ಬೆಳಕಿನ ಕನಿಷ್ಟ ನಿರ್ವಹಣೆಯಾದರೂ ಅಗತ್ಯವಿರುವ ಸಲುವಾಗಿ ಹೆಚ್ಚಿನ ಬಾರಿ ಸಸ್ಯ ಪಾಲನೆಗೆ ಹಿಂದೇಟು ಹಾಕುತ್ತಿರುತ್ತೇವೆ. ಮತ್ತು ಪರ್ಯಾಯಗಳನ್ನು ಹುಡುಕುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಗೋಡೆಗಳಿಗೆ ಹೊಸ ಆಯಾಮ ನೀಡಿ, ಶೂನ್ಯ ಕಾಳಜಿಯಲ್ಲಿ ಹಸಿರನ್ನು ಹೊಂದುವ ಆಲೋಚನೆಯನ್ನು ಪ್ರೋತ್ಸಾಹಿಸುವುದು ಹಾವಸೆಗಳ ‘ಮೋಸ್ ಫ್ರೇಮ್’. ಹಾವಸೆಗಳ ಹಾಸು ತೇವವಾದ ಕಾಂಪೌಂಡ್ ಗೋಡೆಯ ಮೇಲೆ ಬೆಳೆಯುವ, ಮಳೆಕಾಡುಗಳಲ್ಲಿ ಮರದ ಮೇಲೆ ಹಬ್ಬುವ ವಿವಿಧ ಜಾತಿಯ ಹಾವಸೆಗಳನ್ನು ನೋಡಿರುತ್ತೀರಾ. ‘ಪಿನ್ ಕುಷನ್’ ‘ಸ್ಪಾಗ್ನಮ್’ ಮುಂತಾದ ಜಾತಿಯ ಈ ಪಾಚಿಗಳನ್ನು‘ಕೊಕೆಡಾಮಾ’, ‘ಟೆರೇರಿಯಮ್’ಗಳಲ್ಲೂ ಬಳಸಿರುತ್ತೀರಾ. ಯುಟ್ಯೂಬ್ ವೀಡಿಯೋ ನೋಡಿ ಮರದ ಚೂರು, ಕಲ್ಲು...

ಮನೆಯೊಳಗೊಂದು ಮಿನಿ ಮರ

Image
ಸಾಹಿತಿಯ ಮನೆ ತುಂಬ ಪುಸ್ತಕಗಳು, ಚಿತ್ರಕಾರನ ಮನೆ ತುಂಬ ಕಲಾಕೃತಿಗಳು, ಪ್ರವಾಸಿಗನ ಮನೆ ತುಂಬ ತಿರುಗಾಟದ ಸ್ಮರಣಿಕೆಯ ಸಂಗ್ರಹಗಳು;   ನಮ್ಮ ಮನೆ ನಮ್ಮ ಮನಸ್ಸಿನ ಪ್ರತಿಫಲನ. ನಾವ್ಯಾರು, ನಮ್ಮ ಅಭಿರುಚಿಯೇನು, ನಮ್ಮ ಹವ್ಯಾಸಗಳೇನು ಎಂಬುದರ ಬಗ್ಗೆ ನಮ್ಮ ಮನೆ ಕಂತೆ ಕತೆಯನ್ನು ಬಿಚ್ಚಿಡುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕನ ಹಸಿರು ಮನಸ್ಸನ್ನು ಒಳಾಂಗಣ ಸಸ್ಯಗಳ ಬಗೆಗಿನ ಒಲವು ಸಾರಿ ಹೇಳುತ್ತದೆ. ಒಳಾಂಗಣ ಸಸ್ಯಗಳ ಬಳಕೆಯಲ್ಲಿ ಮೇಲ್ನೋಟಕ್ಕೆ ಎರಡು ತರಹದ ಹವ್ಯಾಸಿ ವರ್ಗಗಳನ್ನು ಗುರುತಿಸಬಹುದು. ವೈವಿಧ್ಯತೆ ಬಯಸುವ, ಮನೆಯ ಪ್ರತಿ ಕೋಣೆ, ಪ್ರತಿ ಮೂಲೆ, ಶೆಲ್ಫ್ ನಲ್ಲಿ ಗಿಡಗಳನ್ನು ಬೆಳೆಸಿ ಹಸುರು ಕಾಡೊಂದನ್ನು ನಿರ್ಮಿಸುವ ‘ಮ್ಯಾಕ್ಸಿಮಲಿಸ್ಟ್’ಗಳ ವರ್ಗ ಒಂದಾದರೆ; ಸರಳತೆ ಬಯಸುವ ಒಂದೆರಡು ಗಿಡದೊಂದಿಗೆ ಅನ್ಯೋನತೆಯಿಂದ ದಿನವೂ ಸಂವಾದಿಸುವ ‘ಮಿನಿಮಲಿಸ್ಟ್’ಗಳ ವರ್ಗವೊಂದು. ಅನಾವಶ್ಯಕವಾಗಿ ನರ್ಸರಿಯಲ್ಲಿ ಕಂಡ ಗಿಡವನ್ನೆಲ್ಲಾ ತಂದು ಗುಡ್ಢೆ ಹಾಕಿ, ಗೊಂದಲದ ಗೂಡಾಗಿ, ಅವುಗಳ ಕಾಳಜಿಯಲ್ಲಿ ಹೈರಾಣಾಗುವ ಬದಲು ಎರಡೇ ಗಿಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಒಳ್ಳೆಯದೆಂಬುದು ಮಿನಿಮಲಿಸ್ಟ್ ಗಳ ವಾದ. ಏಕಮೇವ ಅದ್ವಿತೀಯ ಕಣ್ ಮನ ಮೆಚ್ಚುವಂತಹ ಒಂದೇ ಸಸ್ಯವನ್ನು ಸಲಹುವ ಮಿನಿಮಲಿಸ್ಟ್ ಗಳ ಮನಸ್ಥಿತಿ ಇಂದು ‘ಸ್ಟೇಟಮೆಂಟ್ ಪ್ಲಾಂಟ್’ಗಳ ಹೊಸ ಅಲೆಯನ್ನು ಹುಟ್ಟುಹಾಕಿದೆ. ‘ವಾಹ್!’ ಎನಿಸುವ, ತನ್ನಂತೇ ಮತ್ತೊಬ್ಬರಿಲ್ಲ ಎಂಬಂತೆ ಸೆಳೆ...

ತೂಗು ಗಿಡಗಳ ಜೋಗುಳ

Image
  ಗೋಡೆಗಂಟಿಸಿದ ನಲವತ್ತಿಂಚಿನ ಟಿವಿ; ಅಕ್ಕ ಪಕ್ಕ ಶೋ ಕೇಸ್; ಮುಂದೊಂದು ಸೋಫಾ; ಪತ್ರಿಕೆ-ಪುಸ್ತಕ ಜೋಡಿಸಿಟ್ಟ ಟೇಬಲ್; ಒಂದೆರಡು ಕುರ್ಚಿ; ಹರಗಣವನ್ನೆಲ್ಲಾ ಬಚ್ಚಿಡಲೊಂದು ಕಪಾಟು. ಇಂತಹ ನೀರಸ ‘ಲಿವಿಂಗ್ ರೂಮ್’ಗೆ ಜೀವ ತುಂಬುವ ಒಳಾಂಗಣ ಸಸ್ಯಗಳು ಇವತ್ತಿನ ಪೇಟೆ ಮಂದಿಯ ಹೊಸ ಗೀಳು. ಮನೆಯೊಳಕ್ಕೆ ಸಸ್ಯಸಂಪತ್ತನ್ನು ಬರಮಾಡಿಕೊಂಡು ಅವುಗಳ ಆರೈಕೆಯಲ್ಲಿ ಖುಷಿ ಕಾಣುತ್ತಿರುವ ನಗರವಾಸಿಗಳು ಇಂದು ಹಲವಾರು. ನರ್ಸರಿಗೆ ಹೋದಾಗಲೆಲ್ಲಾ ಹೊಸ ಗಿಡ ಕೊಳ್ಳುವ ಆಸೆ ಅವರದು. ಆದರೇನು! ಜಾಗದ್ದೇ ಸಮಸ್ಯೆ. ಈ ಹಿನ್ನೆಲೆಯಲ್ಲಿ ‘ಹ್ಯಾಂಗಿಂಗ್ಸ್’ಗಳ ಟ್ರೆಂಡ್ ಹಸಿರು ಮನಸ್ಸುಗಳನ್ನು ಆಕರ್ಷಿ ಸುತ್ತಿದೆ. ಮನೆಯ ಸೀಲಿಂಗ್ ಗಾರ್ಡನ್ ಆದಾಗ ಯಾವುದೇ ಇಂಜಿನಿಯರ್ ಆಗಿರಲಿ, ಮನೆ ಕಟ್ಟುವಾಗ ಮೇಲ್ಛಾವಣಿಗೆ ‘ಹುಕ್’ಗಳನ್ನು ನಿರ್ಮಿಸಿಯೇ ಇರುತ್ತಾರೆ. ಅವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುವ, ‘ಝೂಮರ್’ ದೀಪಗಳನ್ನು ಸಸ್ಯಗಳಿಂದ ಬದಲಿಸುವ ಸುಸಮಯವಿದು. ಮನೆಯ ಹಜಾರ, ಬಾಲ್ಕನಿಯ ಛಾವಣಿಗಿರುವ ಕೊಕ್ಕೆ-ಕೊಂಡಿಗಳಿಗೆಲ್ಲಾ ಹ್ಯಾಂಗಿಂಗ್ ಪ್ಲಾಂಟ್ ಗಳನ್ನು ಸಿಕ್ಕಿಸಿ, ಇಳಿಯುವ ತರುಲತೆಗಳ ಸೌಂದರ್ಯವನ್ನು ಅನುಭವಿಸುವ ಸಂದರ್ಭವಿದು. ಕ್ರಿಯಾಶೀಲತೆಯ ಅನುಸಾರವಾಗಿ ಕರ್ಟನ್ ರಾಡ್ ಗಳು, ಬಟ್ಟೆಯ ನ್ಯಾಲೆಗಳು ಕೂಡಾ ಹ್ಯಾಂಗಿಂಗ್ ಪಾಟ್ ಗಳ ನೆಚ್ಚಿನ ನೆಲೆಯಾಗಬಹುದು. ಹುಕ್ ಗಳಿಲ್ಲದಿದ್ದರೂ ಪರವಾಗಿಲ್ಲ, ಗೋಡೆಯಿಂದ ಮುಂದೆ ಚಾಚಿದ ಕಬ್ಬಿಣದ ಸ್ಟಾಂಡ್ ಗಳ ಮೂಲಕ ಹ್ಯಾಂಗಿಂಗ್...

ಜಗದ ತಟ್ಟೆಗೆ ಸಿರಿಧಾನ್ಯ ಬಡಿಸಿದ ಭಾರತ - 2023- International Year of Millets

Image
ನಮ್ಮ ಭೂಮಂಡಲದಲ್ಲಿ ಇದುವರೆಗೆ ದಾಖಲಾಗಿರುವುದು ನಾಲ್ಕು ಲಕ್ಷ ಜಾತಿಯ ಸಸ್ಯ ಸಂಪತ್ತು; ಇವುಗಳಲ್ಲಿ ಐವತ್ತು ಸಾವಿರ ಸೇವನೆಗೆ ಯೋಗ್ಯವಾದವು. ಆದರೆ ನಮ್ಮ ಆಹಾರ,  ಗಿರಕಿ ಹೊಡೆಯುತ್ತಿರುವುದು ಅಕ್ಕಿ, ಗೋಧಿ, ಮೆಕ್ಕೆಜೋಳದ ಮಧ್ಯೆ. ಹೆಚ್ಚು ಸಂಶೋಧನೆ ನಡೆಯುತ್ತಿರುವುದು ಇವೇ ಮೂರು ಬೆಳೆಗಳ ಮೇಲೆ. ‘ಕೆಲವೇ ಬೆಳೆ’ಗಳಿಗೆ ಕೇಂದ್ರಿತವಾದ ಪಥ್ಯ ಪದ್ಧತಿ ಆಹಾರ ಭದ್ರತೆಯನ್ನು ದುರ್ಬಲವಾಗಿಸುತ್ತಿದೆ ಎಂಬ ಅಭಿಪ್ರಾಯ ಜಾಗತಿಕವಾಗಿ ವ್ಯಕ್ತವಾಗುತ್ತಿದೆ. ಜೊತೆಗೆ ಹವಾಮಾನ ವೈಪರಿತ್ಯಕ್ಕೆ ನಲುಗಿ ಇವುಗಳ ಕುಸಿಯುತ್ತಿರುವ ಇಳುವರಿ ತಜ್ಞರ ನಿದ್ದೆಗೆಡಿಸಿದೆ.  ‘ವಾವಿಲೋವ್’ನ ವಾದಗಳು ಭತ್ತ ಹುಟ್ಟಿದ್ದು ಭಾರತದಲ್ಲಾದರೂ ನಾವು ಪ್ರೀತಿಯಿಂದ ಸೇವಿಸುತ್ತಿರುವ ಗೋಧಿ ಹುಟ್ಟಿದ್ದು ಮಧ್ಯಪ್ರಾಚ್ಯದಲ್ಲಿ, ಮೆಕ್ಕೆಜೋಳ ಹುಟ್ಟಿದ್ದು ಮೆಕ್ಸಿಕೋದಲ್ಲಿ. ಹೀಗೆ ಪ್ರತಿ ಬೆಳೆಗೂಂದು ತವರಿದೆ; ಆ ತವರಿನಲ್ಲಿ ಬಳಗವಿದೆ; ಕೆಲ ಸದಸ್ಯರಷ್ಟೇ ತಮ್ಮದಲ್ಲದ ದೂರದ ಊರಿನಲ್ಲಿ ನೆಲೆಯೂರಿವೆ ಎಂದಿದ್ದು ರಷ್ಯನ್  ವಿಜ್ಞಾನಿ ವಾವಿಲೋವ್ (1887-1943). ಬೆಳೆಗಳು ಹುಟ್ಟಿ ಬೆಳೆದ ತವರೂರಿನಲ್ಲಿ ಜೈವಿಕ ವೈವಿಧ್ಯತೆ ಅಗಾಧವಾಗಿರುತ್ತದೆ; ಸಸ್ಯವೊಂದರ ಉಳಿವೆಗೆ ಬೇಕಾಗುವ ಅನುವಂಶಿಕ ಧಾತುಗಳ ಶಕ್ತಿ, ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕತೆ ವೈವಿಧ್ಯತೆಯಲ್ಲಡಗಿದೆ; ಸಂಕರಣದಂತ ತಳಿ ಅಭಿವೃದ್ಧಿಗೆ ವೈವಿಧ್ಯತೆ ವರ; ದುರಾದೃಷ್ಟವೆಂದರೆ ಈ ದೇಸೀ ವೈವಿಧ್ಯತೆ ಭವಿಷ್ಯದಲ್ಲಿ ...