Posts

ಕ್ರಿವೈಸ್ ಗಾರ್ಡನಿಂಗ್

Image
  ಅದೊಂದು ಮಹಾನಗರಿ; ಕಾಂಕ್ರೀಟ್ ಕಾಲುದಾರಿ-ಡಾಂಬರು ರಸ್ತೆ; ಮಣ್ಣಿನ ಕುರುಹೂ ಇರದ ಕಲ್ಲು ಹಾದಿಯ ಸಂದಿಯಲ್ಲೊಂದು ಕಳೆ ಗಿಡ; ಚಿಕ್ಕ ಹಳದಿ ಹೂ ಬಿಟ್ಟು ಯಾರ ಕಾಲ ತುಳಿತಕ್ಕೆ ಸಾಯುವೆನೋ ಎಂದು ಎದುರು ನೋಡುತ್ತಿರುತ್ತದೆ. ಪೇಟೆಯ ಹಳೆಯ ಮಣ್ಣಿನ ಗೋಡೆಯ ಮನೆಯ ಬಿರುಕಿನಲ್ಲಿ ಅಶ್ವತ್ಥಗಿಡವೊಂದು ಎರಡೆಲೆ ಬಿಟ್ಟು ಇಣುಕುತ್ತಿರುತ್ತದೆ. ಇವುಗಳನ್ನು ನೆಟ್ಟವರಾರೋ, ನೀರೆರದವರಾರೋ, ಸಾಕಿ ಸಲಹುವರಾರೋ! ಯಾರ ಹಂಗಿಲ್ಲದೆ ಬೆಳೆಯುತ್ತಾ ಸಾಗುವ ಸಂದು-ಗೊಂದಿನ ಈ ಜೀವನ ಇಂದು ‘ಕ್ರಿವೈಸ್ ಗಾರ್ಡನ್’ಎಂಬ ಸುಂದರ ಪ್ರಕಾರಕ್ಕೆ ಪ್ರೇರೇಪಣೆಯಾಗಿದೆ. ಈ ಗಾರ್ಡನಿಂಗ್ ಕಲೆಯನ್ನು ಜನಪ್ರಿಯಗೊಳಿಸಿದ್ದು ಪ್ರಸಿದ್ಧ ‘ಬೊಹೇಮಿಯಾ’ ಶೈಲಿಗೆ ತವರಾದ ‘ಜೆಕ್ ಗಣರಾಜ್ಯ’. ಯುರೋಪಿನ ಒಣ ಶೀತ ಪ್ರದೇಶದ ಎತ್ತರದ ‘ಆಲ್ಪೈನ್’ ಪರ್ವತ ಶ್ರೇಣಿಯ ಬಂಡೆಗಳಲ್ಲಿ ಬೆಳೆಯುವ ಸಸ್ಯವರ್ಗಗಳಿಂದ ಪ್ರೇರೇಪಿತವಾದ ಈ ಗಾರ್ಡನ್ ಪ್ರಕಾರ 1970ರಲ್ಲೇ ಪ್ರಚಾರದಲ್ಲಿತ್ತು. ಕಲ್ಲು-ಮಣ್ಣಲ್ಲೂ ಜೀವ ತುಂಬುವ ನಿಸರ್ಗದ ಮಾಯೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ‘ಕ್ರಿವೈಸ್ ಗಾರ್ಡನ್’ನ ವಿಶಿಷ್ಟತೆ. ಸುಲಭವಾಗಿ ನಿರ್ಮಿಸಲು ಸಾಧ್ಯವಾದ ಈ ಪ್ರಕಾರಕ್ಕೆ ಮುಖ್ಯವಾಗಿ ಬೇಕಾಗಿರುವುದು ಚಪ್ಪಟೆ ಕಲ್ಲುಗಳು, ಮರಳು, ಜಲ್ಲಿ. ಮಣ್ಣು ಅಗೆದು, ಕಂದರ ತೋಡಿ, ವಿವಿಧ ಸ್ತರದಲ್ಲಿ ಮಣ್ಣು ದಿಬ್ಬಗಳನ್ನು ಮಾಡಿ, ಚಪ್ಪಡಿ ಕಲ್ಲನ್ನು ಮಣ್ಣಿನಲ್ಲಿ ಬಿಗಿಯಾಗಿ ಊರಿ, ಕಲ್ಲುಗಳ ನಡುವೆ ಮಣ್ಣು-ಮರಳನ್ನು ಹಿ...

ಹವಾಮಾನ ವೈಪರೀತ್ಯಕ್ಕೆ ಕಾಂತಾರದಲ್ಲಿ ಪರಿಹಾರ!

Image
‘ಕಾಂತಾರ- ಅಪರೂಪದ ಶಬ್ಧವೊಂದು ಇಂದು ಭಾಷೆ ಮೀರಿ ಬೆಳೆದಿದೆ. ಹಲವು ನಿಗೂಢವುಳ್ಳ ಅರಣ್ಯದ ಸುತ್ತ ನಡೆಯುವ ಕಥೆ ಕಾಡು-ನಾಡು ಬೆಸೆಯುವ ಧಾರ್ಮಿಕ ಕೊಂಡಿಯ ಬಗ್ಗೆ ವಿಶೇಷ ರೀತಿಯಲ್ಲಿ ನಿರೂಪಿಸುತ್ತಾ ಹಿರಿಯ ಜನರ ಆಚರಣೆ ನಾವಂದುಕೊಂಡಿರುವಷ್ಟು ಮೂಢವಲ್ಲ, ಬದಲಿಗೆ ಬಲವಾದ ಹಿನ್ನೆಲೆಯಿರುವ, ಆಳವಾದ ಅರ್ಥವಿರುವ, ವಿಜ್ಞಾನಕ್ಕೆ ನಿಲುಕದ ಸಂಗತಿ ಎಂಬುದನ್ನು ತೆರೆದಿಟ್ಟಿದೆ. ಸಿನೆಮಾ ನೋಡಿ ತಿಂಗಳಾದರೂ ಕಾಂತಾರದ ಗುಂಗು ಬಿಟ್ಟಿಲ್ಲ. ಬಹುಶಃ ಪ್ರದರ್ಶನ ಮುಗಿದ ಮೇಲೆ ಪ್ರತಿಯೊಬ್ಬರು ತಮ್ಮೂರಿನ ಸಂಪದ್ಭರಿತ ಸಂಸ್ಕೃತಿಯನ್ನು, ದೈವದ ನೆನಪನ್ನು ಮಾಡಿಕೊಂಡಿರಲು ಸಾಕು! ನನಗೂ ಅರೆಕ್ಷಣ ನಮ್ಮೂರಿನ ಮಾರಿಯಮ್ಮನ ಜಾತ್ರೆ; ಬೇಡರ ವೇಷ; ವರ್ಷಕ್ಕೊಮ್ಮೆ ಕುರಿ-ಕೋಳಿ ಕೊಟ್ಟು ತೃಪ್ತಿ ಪಡಿಸುವ ಭೂತಪ್ಪ, ಹುಲಿಯಪ್ಪ, ಚೌಡಮ್ಮ, ಬರಮ ದೇವರು, ಜಟಕಾ, ಮಾಸ್ತಿಗಳ ಪೂಜೆ; ದೇವರ ಹೆಸರಲ್ಲಿ ಕಾಪಾಡುವ ನಾಗಬನ, ದೇವರ ಕಾಡು; ಎಲ್ಲಾ ಕಣ್ಣಮುಂದೆ ಹಾದುಹೋದವು. ಜೊತೆಗೆ ಪಶು-ಪಕ್ಷಿ, ಗಿಡ-ಮರ, ನೆಲ-ಜಲ, ಬೆಟ್ಟ-ಗುಡ್ಡ, ಕಲ್ಲು-ಮಣ್ಣಿಗೂ ಪೂಜೆ ಮಾಡುವ ನಮ್ಮ ಸಂಸ್ಕೃತಿಯ ಮೂಲ ಉದ್ದೇಶಗಳು ಅಚ್ಚರಿಯನೆಸಿದವು. ಅಷ್ಟಾಗಿಯೂ ನಮ್ಮ ಪೂರ್ವಜರು ನಿಸರ್ಗ ಆರಾಧಕರಾಗಬೇಕಾದ ಅವಶ್ಯಕತೆಯೇನಿತ್ತು!? ಈ ಆಚರಣೆಗಳನ್ನು ಮುಂದಿನ ಜನಾಂಗಕ್ಕೆ ಬಳುವಳಿ ಕೊಡುವ ಅಗತ್ಯವಾದರೂ ಏನಿತ್ತು!? ಇಂದು ಉಂಟಾಗುತ್ತಿರುವ ಹವಾಮಾನ ವೈಪರಿತ್ಯ, ಪರಿಸರ ಹಾನಿ, ಪ್ರಕೃತಿ ವಿಕೋಪ, ಜೀವವೈವಿಧ್ಯತೆಯ ನಾಶದ...

ಕಾಂತಾರದ ಪರಿಸರ ಪಾಠ

Image
  ‘ ಕಾಂತಾರ - ಅಪರೂಪದ ಶಬ್ಧವೊಂದು ಇಂದು ಭಾಷೆ ಮೀರಿ ಬೆಳೆದಿದೆ . ಹಲವು ನಿಗೂಢವುಳ್ಳ ಅರಣ್ಯದ ಸುತ್ತ ನಡೆಯುವ ಕಥೆ ಕಾಡು - ನಾಡು ಬೆಸೆಯುವ ಧಾರ್ಮಿಕ ಕೊಂಡಿಯ ಬಗ್ಗೆ ವಿಶೇಷ ರೀತಿಯಲ್ಲಿ ನಿರೂಪಿಸುತ್ತಾ ಹಿರಿಯ ಜನರ ಆಚರಣೆ ನಾವಂದುಕೊಂಡಿರುವಷ್ಟು ಮೂಢವಲ್ಲ , ಬದಲಿಗೆ ಬಲವಾದ ಹಿನ್ನೆಲೆಯಿರುವ , ಆಳವಾದ ಅರ್ಥವಿರುವ , ವಿಜ್ಞಾನಕ್ಕೆ ನಿಲುಕದ ಸಂಗತಿ ಎಂಬುದನ್ನು ತೆರೆದಿಟ್ಟಿದೆ .  

ಕುಲಾಂತರಿಗಳು

Image
  ಸೆಪ್ಟೆಂಬರ್ ತಿಂಗಳಿನ ಶುರುವಿನಲ್ಲಿ ಅಮೇರಿಕಾ ಹೊಸದೊಂದು ಕುಲಾಂತರಿ ತಳಿಯ ಟೊಮೇಟೊವನ್ನು ಬಳಕೆಗೆ ಅನುಮೋದಿಸುವುದರ ಮೂಲಕ ಜಗತ್ತಿನ ಗಮನ ಸೆಳೆದಿತ್ತು. ಭಾರತವೂ ಕೆಲ ದಿನಗಳ ಹಿಂದಷ್ಟೇ ಸ್ವದೇಶಿ ಕುಲಾಂತರಿ ಸಾಸಿವೆಯನ್ನು ಅನುಮೋದಿಸಿ ಬೆಳೆಯಲು ಅನುಮತಿ ನೀಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಬಹುಶಃ ಮುಂದಿನ ವರ್ಷದಿಂದ ಅಮೇರಿಕಾದ ಅಂಗಡಿಗಳಲ್ಲಿ ಈ ನೇರಳೆ ಟೊಮೇಟೊ ಖರೀದಿಗೆ ಲಭ್ಯವಿರುತ್ತದೆ, ಮತ್ತು ಭಾರತದಲ್ಲಿ ರೈತ ವರ್ಗಕ್ಕೆ ಧಾರಾ ಸಾಸಿವೆ ಪರಿಚಯಾವಾಗಿರುತ್ತದೆ. ಆದರೆ ಎಂದಿನಂತೆ ಸಾಮಾಜಿಕ ವಲಯದಲ್ಲಿ ಕುಲಾಂತರಿಗೆ ವಿರೋಧ ಶುರುವಾಗಿದೆ. ಸ್ವಾಭಾವಿಕವಾಗಿ ಹರಿದುಬಂದ ಜೀನ್ ಗಳಲ್ಲಿ ಕೃತಕವಾಗಿ ಬದಲಾವಣೆ ತರುವ ‘ಜೆನೇಟಿಕ್ ಎಂಜಿನಿಯರಿಂಗ್’ ತಂತ್ರಜ್ಞಾನದ ಮೂಲಕ ಬೇರೊಂದು ಜೀವಿಯ ಜೀನ್ ಗಳನ್ನು ಅಳವಡಿಸಿದ ಸಸ್ಯಗಳನ್ನು ಕುಲಾಂತರಿ ಬೆಳೆಗಳೆಂದು ಕರೆಯಲಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ನಮಗೆ ಬೇಕಾದ ಗುಣಲಕ್ಷಣಗಳನ್ನು ಆರಿಸುತ್ತಾ ಸಾಂಪ್ರದಾಯಿಕವಾಗಿ ತಳಿ ಅಭಿವೃದ್ದಿ ಮಾಡಲು   ಬೇಕಾಗಿರುವುದು ಕನಿಷ್ಟ 15-20 ವರ್ಷಗಳ ಪರಿಶ್ರಮ. ಈ ಅವಧಿಯನ್ನು ಕಡಿತಗೊಳಿಸಲು ವಿಜ್ಞಾನಿಗಳು ಕಂಡುಕೊಂಡ ಪರ್ಯಾಯ ಹಾದಿ ಜೀನ್ ಎಂಜಿನಿಯರಿಂಗ್. ಈ ವಿಧಾನದಿಂದ ಹೊಸ ತಳಿಯೊಂದನ್ನು ಪಡೆಯಲು ಬೇಕಾಗಿರುವುದು ಐದಾರು ವರ್ಷಗಳಾದರೂ ಅಡೆತಡೆ ದಾಟಿ ಅವು ರಂಗಕ್ಕೆ ಇಳಿಯಬೇಕಾದರೆ ಇಪ್ಪತ್ತು-ಮೂವತ್ತು ವಷ ಬೇಕಾಗುವುದು ವಾಸ್ತವ. ಕುಲಾಂತರಿಗಳು ಏಕೆ?...

ಕುಲಾಂತರಿ ಸಾಸಿವೆ

Image
ಭಾರತ ಸರ್ಕಾರದ ಪರಿಸರ ಸಚಿವಾಲಯ (Ministry of Environment, Forest and Climate Change) ‘ಸ್ವದೇಶೀ ಕುಲಾಂತರಿ ಸಾಸಿವೆಯ ಸಂಕರಣ ತಳಿ’ಯನ್ನು ಬೆಳೆಯಲು ಅನುಮತಿ ನೀಡುವುದರೊಂದಿಗೆ ದೇಶದಲ್ಲಿ ಕುಲಾಂತರಿಗಳ ಹೊಸ ಪರ್ವವೊಂದಕ್ಕೆ ಮುನ್ನುಡಿ ಬರೆದಿದೆ. ‘ಜೆನೇಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯ (GEAC) ಶಿಫಾರಸ್ಸಿನ ನಂತರ ನಿರ್ಬಂಧಿತ ಪ್ರದೇಶದಲ್ಲಷ್ಟೇ ಕ್ಷೇತ್ರ ಪ್ರಯೋಗಗಳ ಅಡಿಯಲ್ಲಿದ್ದ ‘ಧಾರಾ ಮಸ್ಟರ್ಡ್ ಹೈಬ್ರೀಡ್-11’ (DMH-11) ಹೆಸರಿನ ತಳಿಯನ್ನು ಬಾಹ್ಯ ಪರಿಸರಕ್ಕೆ ಬಿಡುಗೊಡೆಗೊಳಿಸುವ (environmental release) ಕಾರ್ಯಕ್ಕೆ ಸಚಿವಾಲಯ ಅಸ್ತು ಎಂದಿದೆ. ಸಾಧಕ-ಭಾದಕಗಳ ಅಧ್ಯಯನದ ನಂತರ ವಾಣಿಜ್ಯ ಬೆಳೆಯಾಗಿ ಕುಲಾಂತರಿ ಸಾಸಿವೆ ರೈತರ ಕೈ ಸೇರಿ ಕೃಷಿ ಅಂಗಳಕ್ಕಿಳಿಯಲು ಸಿದ್ಧವಾದರೆ ಬಿ.ಟಿ ಹತ್ತಿಯ ನಂತರ ಭಾರತ ಅಂಗೀಕರಿಸಿದ ಎರಡನೇ ಕುಲಾಂತರಿಯಾಗಿ ಹಾಗೂ ಆಹಾರ ಪದಾರ್ಥವಾಗಿ ಬಳಕೆಯಾಗುವ ಮೊಟ್ಟಮೊದಲ ಕುಲಾಂತರಿ ಬೆಳೆಯಾಗಿ ಹೊಮ್ಮಲಿದೆ. ಆಗಾಗ ಸುದ್ದಿ ಮಾಡುತ್ತಾ ಚರ್ಚೆಯಲ್ಲಿದ್ದ ಕುಲಾಂತರಿ ಸಾಸಿವೆ ಬಳಕೆಯ ವಿಷಯ ಇನ್ನೆರಡೇ ವರ್ಷದಲ್ಲಿ ಬಹುತೇಕ ಇತ್ಯರ್ಥವಾಗುವ ಸಾಧ್ಯತೆಯಿದೆ. ಬಿ.ಟಿ ಹತ್ತಿ ಸುದೀರ್ಘ ಎರಡು ದಶಕಗಳ ತರುವಾಯ ನಮ್ಮ ನೆಲ ಮತ್ತೆ ಕುಲಾಂತರಿಯನ್ನು ಅಪ್ಪುವಂತೆ ಭಾಸವಾಗುತ್ತಿದೆ. ಕುಲಾಂತರಿ ಬೆಳೆಗಳು ‘ಜೆನೇಟಿಕ್ ಎಂಜಿನಿಯರಿಂಗ್’ ಎಂಬ ತಂತ್ರಜ್ಞಾನದ ವಿಧಾನದಿಂದ ಸಸ್ಯಗಳಲ್ಲಿ ಬೇರೆ ಜೀವಿಯಿಂದ (ಇತರೇ ಜಾತಿ ಸಸ್...

ಸಸ್ಯಗಳಲ್ಲಿಯೂ ಹಾರ್ಮೋನ್

Image
  ವಸ್ತುವೊಂದು ‘ಸಜೀವಿ’ಯಾಗುವುದು ತನ್ನೊಳಗಿನ ‘ಜೀವಕೋಶ’ಗಳ ಇರುವಿಕೆಯಿಂದ. ಸರಳವಾಗಿ ಹೇಳುವುದಾದರೆ ಜೀವಕೋಶಗಳೆಂಬ ಇಟ್ಟಂಗಿಗಳಿಂದಲೇ ನಮ್ಮ ದೇಹವೆಂಬ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಪ್ರತಿ ಜೀವಕೋಶಕ್ಕೂ ಉಸಿರಾಡುವ, ಶಕ್ತಿ ಸಂಚಯಿಸುವ, ಪ್ರಚೋದನೆಗೆ ಪ್ರತಿಕ್ರಿಯಿಸುವ ಸಾಮರ್ಥ್ಯವಿರುತ್ತದೆ. ಬ್ಯಾಕ್ಟೀರಿಯಾಗಳನ್ನು ಪರಿಗಣಿಸಿ ನರಮಾನವನ ವರೆಗೆ ಎಲ್ಲರೂ ಜೀವಿಸುತ್ತಿರುವುದು ಇದೇ ‘ಕೋಶ’ಗಳಲ್ಲಿ ನಡೆಯುವ ಮೂಲಭೂತ ಕ್ರಿಯೆಯನ್ನು ಆಧರಿಸಿ. ಕೋಶ-ಕೋಶ ಸೇರಿ ಅಂಗಾಂಶವಾಗಿ, ಅಂಗಾಂಶ ಸೇರಿ ಅಂಗವಾಗಿ, ಅಂಗಾಂಗ ಸೇರಿ ಶರೀರವಾದ ಬಹುಕೋಶಿ ಸಸ್ತನಿಗಳಲ್ಲಿ, ಹಾಗೂ ಬಹುತೇಕ ಇದೇ ಮಾದರಿಯ ವ್ಯವಸ್ಥೆ ಹೊಂದಿರುವ ಸಸ್ಯಗಳ ಜೀವನ ಏಕಕೋಶಿಗಳಿಗಿಂತ ಸಂಕೀರ್ಣವಾದದ್ದು. ಕಾರಣ, ಈ ಕೋಶಗಳ ನಡುವಿನ ಸಂಪರ್ಕ ಜಾಲದ ಅಸಾಧರಣ ಕಾರ್ಯ ವಿಧಾನ. ಕೋಶಗಳ ನಡುವೆ ನಡೆಯುವ ಈ ಒಡನಾಟವನ್ನು ಮೊದಲು ಅರ್ಥೈಸಿದ್ದು ಸಸ್ತನಿಗಳಲ್ಲಿ. ರಕ್ತದಲ್ಲಿ ಹರಿದಾಡುವ ಯಾವುದೋ ಒಂದಷ್ಟು ರಾಸಾಯನಿಕ ಸಂಯುಕ್ತಗಳು ಅವುಗಳ ಬೆಳವಣಿಗೆಯನ್ನು ನಿರ್ದೇಶಿಸುತ್ತವೆ ಎಂದು ತಿಳಿದಿದ್ದು 1850 ರ ಹೊತ್ತಿಗೆ. ಇದೇ ರಾಸಾಯನಿಕ ಸಂದೇಶ ವಾಹಕಗಳನ್ನು ನಂತರದಲ್ಲಿ ‘ಪ್ರಚೋದಿಸುವ’ ಎಂಬ ಅರ್ಥವನ್ನು ಕೊಡುವ ‘ಹಾರ್ಮೋನ್’ ಎಂಬ ಗ್ರೀಕ್ ಪದದಿಂದ ಗುರುತಿಸಲಾಯಿತು. ಮಾಹಿತಿಯ ಸರಳ ಲಭ್ಯತೆಯೊಂದಿಗೆ ಈಗ  ಹಾರ್ಮೋನ್ ಗಳ ತಿಳುವಳಿಕೆ ಜನ ಸಾಮಾನ್ಯರಲ್ಲೂ ಮೂಡಿದೆ. ವಿಜ್ಞಾನದ ಪ್ರಗತಿಯೊಂದಿಗೆ ಸಸ್ತನಿಗಳ...

ಗಿಡಗಳಿರಲವ್ವ ಮನೆ ತುಂಬ - ಒಳಾಂಗಣ ಸಸ್ಯಗಳ ಬಗ್ಗೆ

Image
  ಕಾಡಿನ ಪ್ರಾಣಿ-ಪಕ್ಷಿಗಳನ್ನು ನಾಡಿಗೆ ತಂದು, ಪಳಗಿಸಿ, ಸಾಕಿ-ಬೆಳೆಸಿ, ಅವುಗಳೊಂದಿಗೆ ಭಾವನಾತ್ಮಕ ಬಂಧ ಬೆಳೆಸುವುದು ಮಾನವನಿಗೆ ಹೊಸದಲ್ಲ. ಯುಗ-ಯುಗಗಳಿಂದ ಮೂಲತಃ ನಮಗೆ ಸೇರದ ಎಷ್ಟೋ ಇಂತಹ ವಸ್ತು-ವಿಷಯಗಳನ್ನು ನಮ್ಮದಾಗಿಸಿದ ಹೊಣೆ ನಮ್ಮ ಪೂರ್ವಿಕರದ್ದು. ಬಹುಶಃ ಇಂತದ್ದೆ ಹಾದಿಯಲ್ಲೆಲ್ಲೋ ಶುರುವಾದದ್ದು ಒಳಾಂಗಣ ಸಸ್ಯಗಳನ್ನು ಪಾಲಿಸಿ ಪೋಷಿಸುವ ‘ಇಂಡೋರ್ ಗಾರ್ಡನಿಂಗ್’ನ  ಹವ್ಯಾಸ. ಇತಿಹಾಸದಲ್ಲಿ ಈ ಹವ್ಯಾಸದ ಆರಂಭವನ್ನು ಕರಾರುವಕ್ಕಾಗಿ ಗುರುತಿಸಲಾಗದಿದ್ದರೂ ಕೆಲವೊಂದು ಘಟನೆಗಳನ್ನು ಉಲ್ಲೇಖಿಸಲಾಗುತ್ತದೆ. ಸುಂದರ ಕೆತ್ತನೆಗಳ ಟೆರಾಕೋಟಾ, ಅಮೃತ ಶಿಲೆ, ಪಿಂಗಾಣಿಯ ಹೂಕುಂಡಗಳಲ್ಲಿ ಹಣ್ಣಿನ ಗಿಡಗಳನ್ನು, ಅಲಂಕಾರಿಕ ಗಿಡಗಳನ್ನು ಬೆಳೆಸಿ ಅಂಗಳದಲ್ಲಿ ಒಪ್ಪಗೆ ಜೋಡಿಸುವ ಅಭ್ಯಾಸ ಪ್ರಾಚೀನ ರೋಮನ್, ಈಜಿಪ್ಟ್, ಚೀನಾಗಳಲ್ಲಿ ರೂಢಿಯಲ್ಲಿತ್ತು. ಜಪಾನಿಯನ್ನರು, ಚೀನಿಯರಲ್ಲಿ ಪ್ರಕೃತಿಯನ್ನು ಅನುಕರಿಸಿ ನಕಲಿಸುವ ಬೋನ್ಸಾಯ್, ಪೆನ್ಸಾಯ್ ಕಲೆಗಳು ಇಂದಿಗೂ ಜಗತ್ಪ್ರಸಿದ್ಧ. ನೆಬುಕನೇಜರ್ ಎಂಬ ರಾಜನೊಬ್ಬ ತನ್ನ ಪ್ರೀತಿಯ ಮಡದಿಗಾಗಿ ಬಾಬಿಲೋನ್ (ಇಂದಿನ ಇರಾಕ್)ನ ಅರಮನೆಯಲ್ಲಿ ಖರ್ಜೂರ, ದೇವದಾರು, ಹುಲ್ಲುಗಾವಲುಳ್ಳ ತೇಲುವ ಉದ್ಯಾನವನ್ನು ನಿರ್ಮಿಸಿಸಿದ್ದನಂತೆ. ಅಂದು-ಇಂದು ಈ ಮೈಲಿಗಲ್ಲುಗಳಲ್ಲಿ ಮಹತ್ತರವಾದದ್ದು ಹೊಸ ದೇಶ-ಭೂಭಾಗಗಳ ಅನ್ವೇಷಣೆ, ಹೊಸ ಸಸ್ಯ ಸಂಪತ್ತಿನ ಪರಿಚಯ, ತಳಿಗಳ ಸಂಕರಣೆ ಮತ್ತು ಉದ್ಯಾನವನಗಳಲ್ಲಿ ತಳಿಗಳ ಪ್ರದರ್ಶನ...