Posts

ಸಸ್ಯಗಳಲ್ಲಿಯೂ ಹಾರ್ಮೋನ್

Image
  ವಸ್ತುವೊಂದು ‘ಸಜೀವಿ’ಯಾಗುವುದು ತನ್ನೊಳಗಿನ ‘ಜೀವಕೋಶ’ಗಳ ಇರುವಿಕೆಯಿಂದ. ಸರಳವಾಗಿ ಹೇಳುವುದಾದರೆ ಜೀವಕೋಶಗಳೆಂಬ ಇಟ್ಟಂಗಿಗಳಿಂದಲೇ ನಮ್ಮ ದೇಹವೆಂಬ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಪ್ರತಿ ಜೀವಕೋಶಕ್ಕೂ ಉಸಿರಾಡುವ, ಶಕ್ತಿ ಸಂಚಯಿಸುವ, ಪ್ರಚೋದನೆಗೆ ಪ್ರತಿಕ್ರಿಯಿಸುವ ಸಾಮರ್ಥ್ಯವಿರುತ್ತದೆ. ಬ್ಯಾಕ್ಟೀರಿಯಾಗಳನ್ನು ಪರಿಗಣಿಸಿ ನರಮಾನವನ ವರೆಗೆ ಎಲ್ಲರೂ ಜೀವಿಸುತ್ತಿರುವುದು ಇದೇ ‘ಕೋಶ’ಗಳಲ್ಲಿ ನಡೆಯುವ ಮೂಲಭೂತ ಕ್ರಿಯೆಯನ್ನು ಆಧರಿಸಿ. ಕೋಶ-ಕೋಶ ಸೇರಿ ಅಂಗಾಂಶವಾಗಿ, ಅಂಗಾಂಶ ಸೇರಿ ಅಂಗವಾಗಿ, ಅಂಗಾಂಗ ಸೇರಿ ಶರೀರವಾದ ಬಹುಕೋಶಿ ಸಸ್ತನಿಗಳಲ್ಲಿ, ಹಾಗೂ ಬಹುತೇಕ ಇದೇ ಮಾದರಿಯ ವ್ಯವಸ್ಥೆ ಹೊಂದಿರುವ ಸಸ್ಯಗಳ ಜೀವನ ಏಕಕೋಶಿಗಳಿಗಿಂತ ಸಂಕೀರ್ಣವಾದದ್ದು. ಕಾರಣ, ಈ ಕೋಶಗಳ ನಡುವಿನ ಸಂಪರ್ಕ ಜಾಲದ ಅಸಾಧರಣ ಕಾರ್ಯ ವಿಧಾನ. ಕೋಶಗಳ ನಡುವೆ ನಡೆಯುವ ಈ ಒಡನಾಟವನ್ನು ಮೊದಲು ಅರ್ಥೈಸಿದ್ದು ಸಸ್ತನಿಗಳಲ್ಲಿ. ರಕ್ತದಲ್ಲಿ ಹರಿದಾಡುವ ಯಾವುದೋ ಒಂದಷ್ಟು ರಾಸಾಯನಿಕ ಸಂಯುಕ್ತಗಳು ಅವುಗಳ ಬೆಳವಣಿಗೆಯನ್ನು ನಿರ್ದೇಶಿಸುತ್ತವೆ ಎಂದು ತಿಳಿದಿದ್ದು 1850 ರ ಹೊತ್ತಿಗೆ. ಇದೇ ರಾಸಾಯನಿಕ ಸಂದೇಶ ವಾಹಕಗಳನ್ನು ನಂತರದಲ್ಲಿ ‘ಪ್ರಚೋದಿಸುವ’ ಎಂಬ ಅರ್ಥವನ್ನು ಕೊಡುವ ‘ಹಾರ್ಮೋನ್’ ಎಂಬ ಗ್ರೀಕ್ ಪದದಿಂದ ಗುರುತಿಸಲಾಯಿತು. ಮಾಹಿತಿಯ ಸರಳ ಲಭ್ಯತೆಯೊಂದಿಗೆ ಈಗ  ಹಾರ್ಮೋನ್ ಗಳ ತಿಳುವಳಿಕೆ ಜನ ಸಾಮಾನ್ಯರಲ್ಲೂ ಮೂಡಿದೆ. ವಿಜ್ಞಾನದ ಪ್ರಗತಿಯೊಂದಿಗೆ ಸಸ್ತನಿಗಳ...

ಗಿಡಗಳಿರಲವ್ವ ಮನೆ ತುಂಬ - ಒಳಾಂಗಣ ಸಸ್ಯಗಳ ಬಗ್ಗೆ

Image
  ಕಾಡಿನ ಪ್ರಾಣಿ-ಪಕ್ಷಿಗಳನ್ನು ನಾಡಿಗೆ ತಂದು, ಪಳಗಿಸಿ, ಸಾಕಿ-ಬೆಳೆಸಿ, ಅವುಗಳೊಂದಿಗೆ ಭಾವನಾತ್ಮಕ ಬಂಧ ಬೆಳೆಸುವುದು ಮಾನವನಿಗೆ ಹೊಸದಲ್ಲ. ಯುಗ-ಯುಗಗಳಿಂದ ಮೂಲತಃ ನಮಗೆ ಸೇರದ ಎಷ್ಟೋ ಇಂತಹ ವಸ್ತು-ವಿಷಯಗಳನ್ನು ನಮ್ಮದಾಗಿಸಿದ ಹೊಣೆ ನಮ್ಮ ಪೂರ್ವಿಕರದ್ದು. ಬಹುಶಃ ಇಂತದ್ದೆ ಹಾದಿಯಲ್ಲೆಲ್ಲೋ ಶುರುವಾದದ್ದು ಒಳಾಂಗಣ ಸಸ್ಯಗಳನ್ನು ಪಾಲಿಸಿ ಪೋಷಿಸುವ ‘ಇಂಡೋರ್ ಗಾರ್ಡನಿಂಗ್’ನ  ಹವ್ಯಾಸ. ಇತಿಹಾಸದಲ್ಲಿ ಈ ಹವ್ಯಾಸದ ಆರಂಭವನ್ನು ಕರಾರುವಕ್ಕಾಗಿ ಗುರುತಿಸಲಾಗದಿದ್ದರೂ ಕೆಲವೊಂದು ಘಟನೆಗಳನ್ನು ಉಲ್ಲೇಖಿಸಲಾಗುತ್ತದೆ. ಸುಂದರ ಕೆತ್ತನೆಗಳ ಟೆರಾಕೋಟಾ, ಅಮೃತ ಶಿಲೆ, ಪಿಂಗಾಣಿಯ ಹೂಕುಂಡಗಳಲ್ಲಿ ಹಣ್ಣಿನ ಗಿಡಗಳನ್ನು, ಅಲಂಕಾರಿಕ ಗಿಡಗಳನ್ನು ಬೆಳೆಸಿ ಅಂಗಳದಲ್ಲಿ ಒಪ್ಪಗೆ ಜೋಡಿಸುವ ಅಭ್ಯಾಸ ಪ್ರಾಚೀನ ರೋಮನ್, ಈಜಿಪ್ಟ್, ಚೀನಾಗಳಲ್ಲಿ ರೂಢಿಯಲ್ಲಿತ್ತು. ಜಪಾನಿಯನ್ನರು, ಚೀನಿಯರಲ್ಲಿ ಪ್ರಕೃತಿಯನ್ನು ಅನುಕರಿಸಿ ನಕಲಿಸುವ ಬೋನ್ಸಾಯ್, ಪೆನ್ಸಾಯ್ ಕಲೆಗಳು ಇಂದಿಗೂ ಜಗತ್ಪ್ರಸಿದ್ಧ. ನೆಬುಕನೇಜರ್ ಎಂಬ ರಾಜನೊಬ್ಬ ತನ್ನ ಪ್ರೀತಿಯ ಮಡದಿಗಾಗಿ ಬಾಬಿಲೋನ್ (ಇಂದಿನ ಇರಾಕ್)ನ ಅರಮನೆಯಲ್ಲಿ ಖರ್ಜೂರ, ದೇವದಾರು, ಹುಲ್ಲುಗಾವಲುಳ್ಳ ತೇಲುವ ಉದ್ಯಾನವನ್ನು ನಿರ್ಮಿಸಿಸಿದ್ದನಂತೆ. ಅಂದು-ಇಂದು ಈ ಮೈಲಿಗಲ್ಲುಗಳಲ್ಲಿ ಮಹತ್ತರವಾದದ್ದು ಹೊಸ ದೇಶ-ಭೂಭಾಗಗಳ ಅನ್ವೇಷಣೆ, ಹೊಸ ಸಸ್ಯ ಸಂಪತ್ತಿನ ಪರಿಚಯ, ತಳಿಗಳ ಸಂಕರಣೆ ಮತ್ತು ಉದ್ಯಾನವನಗಳಲ್ಲಿ ತಳಿಗಳ ಪ್ರದರ್ಶನ...

ಝೀ಼ ಝೀ಼

Image
  ಶಹರಗಳಲ್ಲಿ ಆಗಷ್ಟೇ ಅಲಂಕಾರಿಕ ಗಿಡಗಳನ್ನು ಒಳಾಂಗಣದಲ್ಲಿಟ್ಟು ವಿನ್ಯಾಸಗೊಳಿಸುವ ‘ಅರ್ಬನ್ ಲ್ಯಾಂಡ್ ಸ್ಕೇಪಿಂಗ್ ’ ಶುರುವಾದ ಕಾಲ.  ಅದೇ ಕಾಲದಲ್ಲಿ ನಮ್ಮ ನೆಲಕ್ಕೆ ಹೇಗೋ ‘ಝೀ಼ ಝೀ಼ ಪ್ಲಾಂಟ್ ’ ಗಳು ಅವತರಿಸಿದ್ದವು. ಮೃದುವಾದ ಕಾಂಡ; ಕಾಂಡದ ದಂಟಿನ ಅಕ್ಕ ಪಕ್ಕ ಜೋಡಿಸಿಟ್ಟ ಕಡು ಹಸಿರು ಬಣ್ಣದ ‘ಪೋಲಿಷ್’ ಮಾಡಿರುವಂತೆ ಹೊಳೆಯುವ ದಪ್ಪನೆಯ ಎಲೆಗಳು; ನೋಟ, ಸ್ಪರ್ಷ ಎಲ್ಲವೂ ಕೃತಕತೆಯ ಅನುಭವ ಕೊಡುವ ಝೀ಼ ಝೀ಼ ಗಳು ಚಂದದ ಸಿರಾಮಿಕ್ ಕುಂಡದಲ್ಲಿ ಬೇರೂರಿದ್ದವು. ನಾನಂತೂ ಎಷ್ಟೊಂದು ಬಾರಿ ನೈಜ ಝೀ಼ ಝೀ಼ ಗಿಡಗಳನ್ನು ಕೃತಕವೆಂದು ತಿಳಿದು ಮೋಸ ಹೋಗಿದ್ದಿದೆ.

ಸಕ್ಯುಲೆಂಟ್ಸ್ - ನಗುಮೊಗದ ಸುಂದರಿಯರು

Image
  ಫ್ಯಾಷನ್ ನಂತೆಯೇ ದಿನ ದಿನ ಹೊಸತಾಗುವ ಮತ್ತೊಂದು ಜಗತ್ತು ಗಾರ್ಡನಿಂಗ್. ಇತ್ತೀಚೆಗೆ ಗಾಳಿ ಶುದ್ಧೀಕರಿಸುವ ಸ್ನೇಕ್ ಪ್ಲಾಂಟ್, ಪಾಮ್ಸ್, ಡ್ರೆಸಿನಾ, ಪೀಸ್ ಲಿಲ್ಲಿಯಂತಹ ವಿವಿಧ ಜಾತಿಯ ಸಸ್ಯಗಳೊಡನೆ ಒಳಾಂಗಣ ವಿನ್ಯಾಸಕ್ಕೆ ಹೊಸ ಸೇರ್ಪಡೆ ಸಕ್ಯುಲೆಂಟ್ಸ್. ರಸಭರಿತ ದಪ್ಪ ಎಲೆಯ, ವಿವಿಧ ಆಕಾರದ, ವರ್ಷದ 365 ದಿನ ಸುಂದರವಾಗಿ ಅರಳಿ ನಿಲ್ಲುವ, ವಾರಗಟ್ಟಲೇ ನೀರಿಲ್ಲದೆ ಬದುಕುವ, ಯಾವುದೇ ವಾತಾವರಣವನ್ನು ಜಯಿಸುವ, ಗಟ್ಟಿ ಜಾತಿಯ ಸಕ್ಯುಲೆಂಟ್ಸ್ ಗಳು ಈಗ ಎಲ್ಲರಿಗೂ ಅಚ್ಚುಮೆಚ್ಚು. ಕಡಿಮೆ ನೀರಿನಲ್ಲಿ ಹಸನಾಗಿ ಬೆಳೆಯುವ ಈ ಸಕ್ಯುಲೆಂಟ್ಸ್ ಗಳು, ಗಿಡಗಳ ಹುಚ್ಚಿರುವ ಪದೇ ಪದೇ ಹಳ್ಳಿಯ ಮನೆಗೆ ಪಯಣ ಬೆಳೆಸುವ ನಗರವಾಸಿಗಳಿಗೆ ಹೇಳಿ ಮಾಡಿಸಿದ ಸಸ್ಯಗಳು. ಟೇಬಲ್ ಟಾಪ್’ನಲ್ಲಿ ರಾರಾಜಿಸುವ; ಕಾಫಿ ಮಗ್, ಐಸ್ ಕ್ರೀಮ್ ಬೌಲ್, ಪಿಂಗಾಣಿ ಕಟೋರಿ, ಚಿಕ್ಕ ಮೊಸರು ಗಡಿಗೆಗಳಲ್ಲಿ ಮುದ್ದಾಗಿ ಮಲಗುವ ಸಕ್ಯುಲೆಂಟ್ಸ್ ಗಳು ಗುಲಾಬಿ, ನೇರಳೆ, ನೀಲಿ, ಬೂದಿ, ಕೆಂಪು, ಚಾಕೋಲೇಟ್, ಬಂಗಾರದಂತಹ ವಿಶಿಷ್ಟ ಬಣ್ಣಗಳಲ್ಲಿ ಮನ ಸೆಳೆಯುತ್ತವೆ. ತಾವರೆಯಂತೆ ಒತ್ತಗೆ ಜೋಡಿಸಿದ ದಳಗಳ 'ಇಚಿವೇರಿಯಾ', ಮಣಿ ಮಣಿ ಪೋಣಿಸಿದ ಮುತ್ತಿನ ಹಾರದ ಸ್ಟ್ರಿಂಗ್ ಆಫ್ ಪರ್ಲ್, ಗೊಂಚಲು ಗೊಂಚಲು ಎಲೆಯ ಸೆಡಮ್, ಕುಬ್ಜ ಮರದಂತೆ ಕಾಣುವ ಜೇಡ್, ಥೇಟ್ ಕಲ್ಲಿನಂತೆ ಕಾಣುವ ಲಿಥೋಪ್ಸ್ ಗಳು ಒಳಾಂಗಣ, ಹೊರಾಂಗಣ ಎರಡಕ್ಕೂ ಸೂಕ್ತ. ಮರುಭೂಮಿಯ ಮಕ್ಕಳು ಇಂದು ಜಗತ್ತಿನ ಮೂಲೆ ಮೂಲೆ ಆ...

ಜೇನ್ ಕಹಾನಿ_ಪ್ರಜಾವಾಣಿ ಭಾನುವಾರ ಪುರವಣಿ

Image
                                          https://www.prajavani.net/agriculture/technology-in-agriculture/honey-bee-in-karnataka-varieties-and-stories-of-bees-944456.html ಬೆಳ್ಳಂಬೆಳಗೆ; ಸದ್ದು ಗದ್ದಲವಿಲ್ಲದೆ ಬಣ್ಣದ ಅಂಗಿ ತೊಟ್ಟು ಅಕ್ಕರೆಯ ಅತಿಥಿಗಳ ಆಗಮನಕ್ಕೆ ಅರಳಿ ನಿಂತ ಹೂಗಳು; ಹೆಚ್ಚು ಕಾಯಿಸದೆ ‘ಗುಂಯ್ಯ್’ ಗುಡುತ್ತಾ ಮೌನ ಮುರಿದು ಹೂಗಳನ್ನು ಮುತ್ತುವ ದುಂಬಿಗಳು. ಮನುಷ್ಯ ಪ್ರಾಣಿ ಏಳುವ ಮುನ್ನವೇ ಕಾರ‍್ಯಪ್ರವೃತ್ತರಾಗಿ ಹೂವಿಂದ ಹೂವಿಗೆ ಹಾರುತ್ತಾ ಹಿಂಗಾಲಿನ ಪುಟ್ಟ ಪರಾಗ ಚೀಲದಲ್ಲಿ ಪುಷ್ಪಧೂಳಿ ಸಂಗ್ರಹಿಸಿ ಮಕರಂದ ಹೀರುತ್ತಾ ಸಂಜೆಯವರೆಗೂ ಪುಷ್ಪಬೇಟೆ ನಡೆಸಿ ಮನೆಗೆ ವಾಪಸ್ಸ್! ಹೀಗೆ ಸಂಗ್ರಹಿಸಿ ತಂದ ಪರಾಗ, ಮಕರಂದವನ್ನು ಸಂಸ್ಕರಿಸಿ, ಗೂಡಿನ ಕೋಶಗಳಲ್ಲಿ ಇಳಿಸಿ, ಕೋಶದ್ವಾರವನ್ನು ಮುಚ್ಚುವ ಗಡಿಬಿಡಿ. ರಾಣಿ-ಮರಿಗಳ ಆರೈಕೆ, ಗೂಡಿನ ಸ್ವಚ್ಛತೆ, ಹಗಲು-ರಾತ್ರಿ ಕಾವಲು, ಮುಂತಾದ ಎಲ್ಲಾ ಕೆಲಸಗಳನ್ನು ತಮ್ಮಲ್ಲೇ ಹಂಚಿಕೊಂಡು ಕಸರತ್ತಿನ ಸಮರಸದ ಜೀವನ ನಡೆಸುವ ಜೇನು ನೊಣಗಳ ಜಗತ್ತು ವಿಸ್ಮಯ. ಜೇನು ನೊಣಗಳ ಜಾಡು ಹಿಡಿದು 30 ಮಿಲಿಯನ್ ವರ್ಷಗಳಿಂದ ಜೀವಿಸುತ್ತಿರುವ, ಡೈನೋಸಾರ್ ಗಳಿಗಿಂತ ಹಳೆಯದಾದ ಈ ಪುಟ್ಟ ಜೀವಿಗಳು 2.5ಮಿಲಿಯನ್ ವರ್ಷಗ...

ಶ್ರೀನಗರದ ಟುಲಿಪ್ ತೋಟದಲ್ಲಿ…

Image
                 ಬೇಸಿಗೆ ಬಂತು, ಬಿಸಿಲ ತಂತು, ತನು ತಂಪು ಬಯಸಿತು. ಕೋವಿಡ್ ಮಾರಿ ಸದ್ಯ ಶಾಂತವಾಗಿದೆ. ಮಾರ್ಚ ಎಂಡ್ ತಲೆ ಬಿಸಿ ಮುಗಿದಿದೆ. ಪ್ರವಾಸಕ್ಕೊಂದು ನೆವ! ಇದೇ ಸರಿಯಾದ ಸಮಯವೆಂದು ಹಿಲ್ ಸ್ಟೇಷನ್ ಕಡೆ ಮುಖ ಮಾಡುವುದು ನಮ್ಮಂತಹ ಎಲ್ಲಾ ಪ್ರವಾಸಿಗರ ಕಥೆ. ಬೇಸಿಗೆಯ ಝಳ ತಪ್ಪಿಸಿಕೊಳ್ಳಲು ಊಟಿ, ಶಿಮ್ಲಾ, ಕುಲು-ಮನಾಲಿ, ಲೇಹ್-ಲಡಾಖ್ ಗಳಂತಹ ಸ್ಥಳಗಳಿಗೆ ಪ್ರವಾಸ ಹೊರಡುವುದು ಸಾಮಾನ್ಯ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಬಹುಶಃ ಭೂಲೋಕದ ಸ್ವರ್ಗ ‘ಕಾಶ್ಮೀರ’ದ್ದು. ಬಿರುಸಾದ ಚಳಿಗಾಲ ಮುಗಿದು ವಸಂತ ಕಾಲ ಶುರುವಾಗುವ ಹೊತ್ತಿನಲ್ಲಿ ಕಾಶ್ಮೀರ ಹೂವುಗಳಿಂದ ನಗುತ್ತಿರುತ್ತದೆ ಎಂದು ನಾವು ಬಲ್ಲವರಿಂದ ಕೇಳಿದ್ದೆವು. ತೋಟಗಾರಿಕಾ ಪದವೀಧರ ದಂಪತಿಯಾದ ನಮಗೆ ಹಿಮಾಚ್ಛಾದಿತ ಕಾಶ್ಮೀರಕ್ಕಿಂತ ಹೂಗಳಿಂದ ಅಲಂಕೃತವಾದ ಕಾಶ್ಮೀರವನ್ನು, ಅದಕ್ಕಿಂತ ಹೆಚ್ಚಾಗಿ ಶ್ರೀನಗರದ ‘ಟುಲಿಪ್ ಫೆಸ್ಟಿವಲ್ ’ ನೋಡುವ ಬಯಕೆಯಿತ್ತು. ಗೂಗಲ್ ಬಾಬಾನ ಸಹಾಯದಿಂದ ಪ್ಲಾನಿಂಗ್ ಕೂಡಾ ಆಗಿತ್ತು. ಪ್ರತಿ ವರ್ಷದಂತೆ ಟುಲಿಪ್ ಹಬ್ಬ ಏಪ್ರಿಲ್ ತಿಂಗಳಲ್ಲಿ ಶುರುವಾಗುವ ಮಾಹಿತಿಯೊಂದಿಗೆ ನಮ್ಮ ಪ್ರವಾಸವನ್ನು ಏಪ್ರಿಲ್ ನಲ್ಲಿ ಯೋಜಿಸಿದ್ಧೆವು. ಆ ದಿನಕ್ಕಾಗಿ ಎದುರು ನೋಡುತ್ತಿದ್ದ ನಮಗೆ ಮಾರ್ಚ ೨೩ರಂದು ಟುಲಿಪ್ ತೋಟ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಪುಳಕವಾಗಿತ್ತು. ...

ಮೀಮ್ ಕಥೆ

Image
     ಬೆಳಗೆದ್ದು ಗರಿ ಗರಿ ದಿನಪತ್ರಿಕೆ ಹಿಡಿದು ಪ್ರಚಲಿತ ವಿದ್ಯಮಾನಗಳನ್ನು ಓದುವ ಕಾಲವೊಂದಿತ್ತು . ಈಗ ದಿನಪತ್ರಿಕೆಗಳ ಸ್ಥಾನವನ್ನು ಸ್ಮಾರ್ಟ್ ಫೋನ್ ಗಳು ಆಕ್ರಮಿಸಿವೆ . ತಾಸಿಗೊಮ್ಮೆ ಹೊಸ ಸುದ್ದಿಗಳನ್ನು ‘ ರಿಫ್ರೆಶ್ ’ ಮಾಡುವುದು ಒಂದು ರೀತಿಯ ಗೀಳಾಗಿಬಿಟ್ಟಿದೆ . ಹೀಗೇ ಮೊಬೈಲ್ ಪರದೆಯನ್ನು ಸ್ಕ್ರೋಲ್ ಮಾಡುತ್ತಿರುವಾಗ ನಮ್ಮ ಗಮನ ಸೆಳೆಯುವುದು ಸುದ್ದಿಗಳ ಮಧ್ಯೆ ಇಣುಕುವ , ವಿನೋದಮಯ ಕ್ಯಾರೆಕ್ಟರ್   ಪಂಚಿಂಗ್   ಸಾಲು ಗಳ   ಒಡನೆ   ಮೂಡುವ  ‘ ಮೀಮ್ ‘ ಗಳು  (meme).  ಪ್ರಚಲಿತ   ಸುದ್ದಿಗಳು   ಬಿತ್ತರವಾಗುವ   ಮುನ್ನವೇ   ಅವುಗಳನ್ನು   ಗೇಲಿ   ಮಾಡಿ   ವೈರಲ್   ಆಗುವ   ಈ  ‘ ಮೀಮ್ ’ ಗಳು   ಸಾಂಸ್ಕೃತಿಕ ,  ಸಾಮಾಜಿಕ ,  ರಾಜಕೀಯ   ವಿಷಯಗಳನ್ನು   ಹಾಸ್ಯಮಯವಾಗಿ ,  ವಿಡಂಬನಾತ್ಮಕವಾಗಿ   ವ್ಯಕ್ತಪಡಿಸುವ   ಅಂರ ‍ ್ಜಾಲ   ಸಂಸ್ಕೃತಿಯಾಗಿಬಿಟ್ಟಿವೆ . ಕ್ಷಣ   ಹೊತ್ತಿನಲ್ಲಿ   ಕೋಟ್ಯಾಂತರ   ಡಿಜಿಟಲ್   ಪ್ರೇಕ್ಷಕರನ್ನು   ತಲುಪಿ  ‘ ವೈರಲ್ ’   ಆಗುವ  ‘ ಮೀಮ್ ’ ಗಳ   ಅಸಲಿ   ಕಥೆ   ಕುತೂಹಲಕಾರಿಯಾಗಿದ್ದು .  ನೆಟ್ಟಿಗ...